ಹಾವೇರಿ: ಏಲಕ್ಕಿ ನಗರ ಹಾವೇರಿಯಲ್ಲಿ ಇದೀಗ ಕೆಂಪು ಮತ್ತು ಹಳದಿ ಸುಂದರಿಯರದೇ ಮಾತು. ಕೆಂಪು ಹಳದಿ ಸುಂದರಿಯರ ವನಪು ವಯ್ಯಾರಕ್ಕೆ ಮನಸೋತ ಜನ ಕೆಲಕಾಲ ನಿಂತು ಸುಂದರಿಯರ ಕಣ್ತುಂಬಿಕೊಳ್ಳುತ್ತಾರೆ. ಅವರ ಬೆಡಗು ಭಿನ್ನಾಣಕ್ಕೆ ಏಲಕ್ಕಿನಗರಿಯ ಮನಸೋತಿದ್ದಾರೆ. ಈ ಸುಂದರಿಯರ ಸುತ್ತ ಕಾಕಪೀಕಗಳ ಸದ್ದು ಸುಂದರಿಯರ ಚೆಲುವಿಗೆ ಮತ್ತಷ್ಟು ಮೆರಗು ನೀಡುತ್ತಿವೆ.
ಬೇಸಿಗೆ ಮುಗಿದು ಮಳೆಗಾಲ ಆರಂಭವಾಗುತ್ತಿದ್ದಂತೆ ಏಲಕ್ಕಿನಗರಕ್ಕೆ ಹೊಸ ಕಳೆ ಬರಲಾರಂಭಿಸುತ್ತದೆ. ಈ ಹೊಸ ಕಳೆಗೆ ಕಾರಣ ನಗರದ ಪ್ರಮುಖ ರಸ್ತೆಗಳಲ್ಲಿ ಮೈತಳೆಯುವ ಗುಲ್ಮೊಹರ್ ಮತ್ತು ಗೋಲ್ಡನ್ ಚೈನ್ ಪುಷ್ಪಗಳು. ನಗರದ ರಸ್ತೆಗಳ ಇಕ್ಕೆಲಗಳಲ್ಲಿ ಬೆಳೆದುನಿಂತಿರುವ ಈ ಮರಗಳಲ್ಲಿ ಇದೀಗ ಕೆಂಪು ಮತ್ತು ಹಳದಿ ಪುಷ್ಪಗಳ ಅರಳುವಿಕೆ ಆರಂಭವಾಗಿದೆ. ಮರಕ್ಕೆ ಮರನೇ ಹೂ ತೊಟ್ಟಂತೆ ನಿಲ್ಲುವ ಈ ಪುಷ್ಪಗಳನ್ನು ಎಷ್ಟು ನೋಡಿದರು ಸಾಲದು.