ಹಾನಗಲ್ (ಹಾವೇರಿ): ಕೊರೊನಾ ಎಫೆಕ್ಟ್ನಿಂದ ಪದವೀಧರ ಉದ್ಯೋಗಿಗಳಿಗೆ, ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕೊಡುವ ಉದ್ಯೋಗ ಖಾತ್ರಿ ಕೆಲಸವೇ ಗತಿಯಾಗಿದೆ. ನರೇಗಾ ಯೋಜನೆಯಲ್ಲಿ ಸಿಗುವ ಈ ಕೂಲಿಯ ಮೊರೆ ಹೋಗಿರುವ ಪದವೀಧರರು, ಗುದ್ದಲಿ, ಸಲಕೆ ಕೈಯಲ್ಲಿ ಹಿಡಿಯುತ್ತಿದ್ದಾರೆ.
ಹಾನಗಲ್ತಾಲೂಕಿನ ಮಲಗುಂದ ಗ್ರಾಮದ ವಿನಾಯಕ ಸಾತೇನಹಳ್ಳಿ ಎಂಬ ಎಂ.ಎ. ಪದವೀಧರ, ಚಿಕ್ಕಬಾಸುರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕನಾಗಿದ್ದಾರೆ. ಆದರೆ ಕೊರೊನಾ ಪರಿಣಾಮ ಎಲ್ಲಾ ಶಾಲಾ-ಕಾಲೇಜುಗಳು ಸಂಪೂರ್ಣ ಬಂದ್ ಆಗಿದ್ದರಿಂದ ಕೆಲಸವಿಲ್ಲದಂತಾಗಿದೆ. ಕುಟುಂಬದ ನಿರ್ವಹಣೆಯ ಹೊಣೆ ಹೊತ್ತಿದ್ದ ಯುವಕನಿಗೆ ಆಸರೆಯಾಗಿದ್ದು, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ. ಇದೀಗ ಗ್ರಾಮದಲ್ಲಿ ಕೆರೆ ಕಟ್ಟೆಗಳ ಕೆಲಸ ನಡೆಯುತ್ತಿದ್ದು, ವಿನಾಯಕ ಪ್ರತಿನಿತ್ಯ ಕೆಲಸಕ್ಕೆ ಹೋಗುತ್ತಿದ್ದಾರೆ.