ಹಾವೇರಿ:ಜಿಲ್ಲೆಯಲ್ಲಿ ಎಡೆಬಿಡದೆ ಸುರಿದ ಮಳೆ ಕೊಂಚ ತನ್ನ ಆರ್ಭಟ ಕಡಿಮೆ ಮಾಡಿದ್ದು, ಜನ ನಿಟ್ಟುಸಿರು ಬಿಟ್ಟಿದ್ದಾರೆ. ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಅಂತರ್ಜಲ ಪ್ರಮಾಣ ಹೆಚ್ಚಾಗಿದೆ. ಕೆರೆ ಕಟ್ಟೆಗಳು ಕೋಡಿ ಬಿದ್ದು ಹರಿಯಲಾರಂಭಿಸಿವೆ.
ಹಾವೇರಿಯಲ್ಲಿ ತಗ್ಗಿದ ವರುಣನ ಆರ್ಭಟ: ಕೊಳವೆ ಬಾವಿಯಲ್ಲಿ ಉಕ್ಕುತ್ತಿದೆ ಅಂತರ್ಜಲ - ಹಾವೇರಿಯಲ್ಲಿ ಮಳೆಗೆ ಅಂತರ್ಜಲ ಭರ್ತಿ ಸುದ್ದಿ
ಹಾವೇರಿ ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಸುರಿದ ಮಳೆಯಿಂದ ಅಂತರ್ಜಲ ಹೆಚ್ಚಾಗಿದ್ದು,ಕೆರೆ ಕಟ್ಟೆಗಳು ಕೋಡಿ ಬಿದ್ದು ಹರಿಯಲಾರಂಭಿಸಿವೆ.
ಎಡೆಬಿಡದೇ ಸುರಿದ ಮಳೆಗೆ ಅಂತರ್ಜಲ ಭರ್ತಿ
ಇನ್ನು ಬಹುತೇಕ ಕೊಳವೆ ಬಾವಿಗಳಲ್ಲಿ ನೀರು ಚಿಮ್ಮುತ್ತಿದೆ. ಸೋಮವಾರ ಹಿರೇಕೆರೂರು ಸುಣ್ಣದಕಾಲುವೆಯಲ್ಲಿ ಕೊಚ್ಚಿಹೋಗಿರುವ ಬಾಲಕನ ಮೃತದೇಹದ ಶೋಧ ಕಾರ್ಯ ಇಂದು ಕೂಡ ಮುಂದುವರೆಯಲಿದೆ. ಈ ಮಧ್ಯ ಮುಂಜಾಗೃತವಾಗಿ ಜಿಲ್ಲೆಗೆ ಇಂದು ಎನ್ಡಿಆರ್ಎಫ್ ತಂಡ ಆಗಮಿಸಲಿದೆ.