ಕರ್ನಾಟಕ

karnataka

ETV Bharat / state

ರಾಣೆಬೆನ್ನೂರಿಗೆ ವಲಸೆ ಬಂದ ಹಸಿರು ಪಾರಿವಾಳಗಳು! - ರಾಣೇಬೆನ್ನೂರು ಸುದ್ದಿ

ಈ ಅಪರೂಪದ ಹಸಿರು ಪಾರಿವಾಳಗಳು ಮಳೆಗಾಲದ ಪ್ರಾರಂಭದಲ್ಲಿ ಹಾವೇರಿ, ದಾವಣಗೆರೆ, ಬಳ್ಳಾರಿ ಜಿಲ್ಲೆಗಳ ಕಾಡಿನತ್ತ ವಲಸೆ ಬರುತ್ತವೆ.

ಹಸಿರು ಪಾರಿವಾಳಗಳು
ಹಸಿರು ಪಾರಿವಾಳಗಳು

By

Published : Sep 2, 2020, 12:54 PM IST

Updated : Sep 2, 2020, 1:14 PM IST

ರಾಣೆಬೆನ್ನೂರು: ನಗರದ ಹೊರವಲಯದ ಶಿವಗಂಗಾ ಪಬ್ಲಿಕ್ ಶಾಲೆಯ ಹತ್ತಿರ ವಿದ್ಯುತ್ ತಂತಿಯ ಮೇಲೆ ಹಳದಿ ಕಾಲಿನ ಹಸಿರು ಪಾರಿವಾಳಗಳು ಕುಳಿತಿರುವುದು ಕಂಡು ಬಂದಿವೆ.

ಸುಮಾರು 20ಕ್ಕೂ ಹೆಚ್ಚು ಹಸಿರು ಪಾರಿವಾಳಗಳು ಪಶ್ಚಿಮ-ಪೂರ್ವ ಘಟ್ಟಗಳಲ್ಲಿ ಮತ್ತು ನಿತ್ಯಹರಿದ್ವರ್ಣ ಕಾಡುಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತವೆ. ಈ ಪಾರಿವಾಳಗಳ ಇರುವಿಕೆಯನ್ನು ವನ್ಯಜೀವಿ ಛಾಯಾಗ್ರಾಹಕ ನಾಮದೇವ ಕಾಗದಗಾರ ಪತ್ತೆ ಹಚ್ಚಿ ತಮ್ಮ ಕ್ಯಾಮರಾ ಮೂಲಕ ಸೆರೆ ಹಿಡಿದಿದ್ದಾರೆ.

ರಾಣೆಬೆನ್ನೂರಿಗೆ ವಲಸೆ ಬಂದ ಹಸಿರು ಪಾರಿವಾಳಗಳು

ರಾಣೆಬೆನ್ನೂರು ಪರಿಸರದಲ್ಲಿ ಹೆಚ್ಚಾಗಿ ಹಿಂದೆಂದು ಕಾಣದ ಹಸಿರು ಬಣ್ಣದ ಜೋಡಿ ಪಾರಿವಾಳಗಳು ಪಶ್ಚಿಮಘಟ್ಟ ಮತ್ತು ಮಲೆನಾಡಿನ ಎತ್ತರದ ಮರಗಳಲ್ಲಿ ಕಂಡು ಬರುತ್ತವೆ. ಕಳೆದ ಐದಾರು ವರ್ಷಗಳಲ್ಲಿ ಅನೇಕ ಜೀವ ಸಂಕುಲಗಳ ಛಾಯಾಚಿತ್ರಗಳನ್ನು ದಾಖಲಿಸಿರುವ ನನಗೆ ಈ ಹಸಿರು ಪಾರಿವಾಳಗಳು ನಮ್ಮ ಹಾವೇರಿ ಪರಿಸರದಲ್ಲಿ ಕಂಡಿದ್ದು ವಿಶೇಷವೆನಿಸಿತು. ಪಶ್ಚಿಮ-ಪೂರ್ವ ಘಟ್ಟಗಳಿಂದ ನಮ್ಮ ಕಡೆಗೆ ವಲಸೆ ಬಂದಿರಬಹುದೆಂದು ಛಾಯಾಗ್ರಾಹಕ ನಾಮದೇವ ಕಾಗದಗಾರರ ಅಭಿಪ್ರಾಯಪಟ್ಟಿದ್ದಾರೆ.

ಈ ಅಪರೂಪದ ಹಸಿರು ಪಾರಿವಾಳಗಳು ಮಳೆಗಾಲದ ಪ್ರಾರಂಭದಲ್ಲಿ ಹಾವೇರಿ, ದಾವಣಗೆರೆ, ಬಳ್ಳಾರಿ ಜಿಲ್ಲೆಗಳ ಕಾಡಿನತ್ತ ವಲಸೆ ಬರುತ್ತವೆ. ನಂತರ ಸಪ್ಟೆಂಬರ್-ಅಕ್ಟೋಬರ್ ಕೊನೆಯ ಸಮಯದಲ್ಲಿ ತಮ್ಮ ಮೂಲ ಸ್ಥಾನಕ್ಕೆ ಮರಳುತ್ತವೆ ಎನ್ನುತ್ತಾರೆ ಛಾಯಾಗ್ರಾಹಕ ಕಾಗದಗಾರ.

Last Updated : Sep 2, 2020, 1:14 PM IST

ABOUT THE AUTHOR

...view details