ಹಾನಗಲ್: ಲಾಕ್ ಡೌನ್ನಿಂದ ಗ್ರಾಮದಲ್ಲಿ ಪ್ರತಿ ಶನಿವಾರ ನಡೆಯುತ್ತಿದ್ದ ಸಂತೆ ರದ್ದಾಗಿದೆ. ಹಾಗಾಗಿ ಹಾನಗಲ್ ತಾಲೂಕು ಆಡೂರು ಗ್ರಾಮ ಪಂಚಾಯತ್ ಸದಸ್ಯ ಶ್ರೀಕಾಂತ ಕೊಂಚಿಗೇರಿ ಅವರು ಸ್ವತಃ ತಾವೇ ತರಕಾರಿ ಮಾರುವುದರೊಂದಿಗೆ ಜನರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ತರಕಾರಿ ಮಾರುವುದರೊಂದಿಗೆ ಕೊರೊನಾ ಜಾಗೃತಿ ಮೂಡಿಸುತ್ತಿರುವ ಗ್ರಾಮ ಪಂಚಾಯತ್ ಸದಸ್ಯ - ಗ್ರಾಮ ಪಂಚಾಯತ್ ಸದಸ್ಯ ಶ್ರೀಕಾಂತ ಕೊಂಚಿಗೇರಿ
ಹಾನಗಲ್ ತಾಲೂಕಿನ ಆಡೂರು ಗ್ರಾಮ ಪಂಚಾಯತ್ ಸದಸ್ಯ ಶ್ರೀಕಾಂತ ಕೊಂಚಿಗೇರಿ ಅವರು ಸ್ವತಃ ತರಕಾರಿ ಮಾರುವುದರೊಂದಿಗೆ, ತರಕಾರಿ ಕೊಳ್ಳಲು ಬರುವ ಜನರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಆಡೂರ ಗ್ರಾಮ ಪಂಚಾಯತ್ ಸದಸ್ಯ ಶ್ರೀಕಾಂತ ಕೊಂಚಿಗೇರಿ
ಈ ಬಗ್ಗೆ ಮಾತನಾಡಿದ ಅವರು, ಲಾಕ್ಡೌನ್ನಿಂದ ಗ್ರಾಮದ ಜನರಿಗೆ ತರಕಾರಿಗಳನ್ನ ಖರೀದಿಸುವುದು ತೊಂದರೆಯಾಗುತ್ತಿತ್ತು. ಅಲ್ಲದೇ ತರಕಾರಿ ಮಾರಲು ಬರುವ ವ್ಯಾಪಾರಸ್ಥರು ಹೆಚ್ಚಿನ ಬೆಲೆಗೆ ಮಾರುತ್ತಿದ್ದರು. ಹಾಗಾಗಿ ನಾನೇ ಮಾರ್ಕೆಟ್ಗೆ ತೆರಳಿ ತರಕಾರಿಗಳನ್ನ ತಂದು ಸಾರ್ವಜನಿಕರಿಗೆ ನಿಗದಿತ ಬೆಲೆಗೆ ಮಾರುತ್ತಿದ್ದೇನೆ ಎಂದು ತಿಳಿಸಿದರು.
ಇನ್ನು ಇಲ್ಲಿ ತರಕಾರಿ ಕೊಳ್ಳಲು ಬರುವ ಜನರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವುದರ ಮೂಲಕ ಅವರಿಗೆ ಯಾವುದೇ ರೀತಿ ಹೊರೆಯಾಗದಂತೆ ತರಕಾರಿ ಮಾರುತ್ತಿರುವುದಾಗಿ ಗ್ರಾ.ಪಂ. ಸದಸ್ಯ ಶ್ರೀಕಾಂತ್ ಹೇಳಿದ್ರು.