ಹಾವೇರಿ :ಉತ್ತರ ಕರ್ನಾಟಕದ ಶಾಸಕರಿಗೆ ರಾಜಕೀಯ ಪ್ರಾತಿನಿಧ್ಯ ಹಾಗೂ ಯೋಗ್ಯ ಅಧಿಕಾರ ದೊರೆತರೆ ಉತ್ತರ ಕರ್ನಾಟಕ ಅಭಿವೃದ್ಧಿಯಾಗುತ್ತದೆ. ಆದರೆ ಎಲ್ಲ ಅಧಿಕಾರ ದಕ್ಷಿಣ ಕರ್ನಾಟಕಕ್ಕೆ ಮಾತ್ರ ಮೀಸಲಾಗುತ್ತಿರುವುದು ದುರಂತದ ಸಂಗತಿ ಎಂದು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಸೋಮಶೇಖರ್ ಕೋತಂಬ್ರಿ ಅಭಿಪ್ರಾಯ ಪಟ್ಟಿದ್ದಾರೆ.
ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ಕೊಡವಂತೆ ಉ.ಕ ಸಮಿತಿ ಅಧ್ಯಕ್ಷ ಆಗ್ರಹ - ಸುವರ್ಣಸೌಧ
ಉತ್ತರ ಕರ್ನಾಟಕದ ಶಾಸಕರಿಗೆ ರಾಜಕೀಯ ಪ್ರಾತಿನಿಧ್ಯ ಹಾಗೂ ಯೋಗ್ಯ ಅಧಿಕಾರ ದೊರೆತರೆ ಉತ್ತರ ಕರ್ನಾಟಕ ಅಭಿವೃದ್ಧಿಯಾಗುತ್ತದೆ. ಆದರೆ ಎಲ್ಲ ಅಧಿಕಾರ ದಕ್ಷಿಣ ಕರ್ನಾಟಕಕ್ಕೆ ಮಾತ್ರ ಮೀಸಲಾಗುತ್ತಿರುವುದು ದುರಂತದ ಸಂಗತಿ ಎಂದು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಸೋಮಶೇಖರ್ ಕೋತಂಬ್ರಿ ಅಭಿಪ್ರಾಯ ಪಟ್ಟಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಪ್ರತಿನಿಧಿಗಳು ಬೆಳಗಾವಿಯಲ್ಲಿ ಸುವರ್ಣಸೌಧವನ್ನು ಕಟ್ಟಿ ದಶಕಗಳೇ ಕಳೆದಿದೆ. ಸಾವಿರಾರು ಕೋಟಿ ಖರ್ಚು ಮಾಡಿ ಸುವರ್ಣಸೌಧವನ್ನು ಕಟ್ಟಿ ಕೇವಲ ಬೆರಳೆಣಿಕೆ ದಿನ ಅಲ್ಲಿ ಕಾಣಿಸುವುದಾದರೇ ಅದನ್ನ ಕಟ್ಟಿರುವ ಔಚಿತ್ಯವಾದರು ಏನು ಎಂದು ಪ್ರಶ್ನಿಸಿದರು. ಕೇವಲ ವರ್ಷಕ್ಕೆ ಒಂದು ಬಾರಿ ಮಾತ್ರ ಸಭೆ ಮಾಡಿದ್ರೆ ಅದು ಜನಪರವಾಗುವುದಿಲ್ಲ. ರಾಜ್ಯ ಸರ್ಕಾರದ ಶೇ.50 ರಷ್ಟು ಇಲಾಖೆಯನ್ನು ಸುವರ್ಣಸೌಧಕ್ಕೆ ವರ್ಗಾಯಿಸಿದರೆ ಅದು ಕ್ರೀಯಾಶೀಲವಾಗುತ್ತದೆ. ಇಲ್ಲದಿದ್ದರೆ ಇದು ಎಂಟು ದಿನದ ಸೌದತ್ತಿ ಜಾತ್ರೆಯಂತಾಗುತ್ತದೆ ಎಂದು ಆರೋಪಿಸಿದರು.
ಹೊಸದಾಗಿ ಸಿಎಂ ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ಉತ್ತರ ಕರ್ನಾಟಕ ಜನರಲ್ಲಿ ಆಶಾಭಾವನೆ ಮೂಡಿಸಬೇಕಾದರೆ ನೂತನ ಸರ್ಕಾರದ ಸಚಿವರು ಸುವರ್ಣಸೌಧದಲ್ಲಿ ಪ್ರಮಾಣವಚನ ಸ್ವೀಕರಿಸಬೇಕು ಎಂದು ಒತ್ತಾಯಿಸಿದರು. ಉತ್ತರ ಕರ್ನಾಟಕ ಅಭಿವೃದ್ಧಿಯಾಗಬೇಕಾದರೆ ಪ್ರತ್ಯೇಕ ಪ್ರಾಧಿಕಾರ ರಚನೆಯಾಗಬೇಕು. ಬಜೆಟ್‌ನಲ್ಲಿ ಅರ್ಧ ಹಣವನ್ನು ಉತ್ತರ ಕರ್ನಾಟಕಕ್ಕೆ ಮೀಸಲಿಡಬೇಕು ಎಂದು ಒತ್ತಾಯಿಸಿದರು.