ರಾಣೆಬೆನ್ನೂರ:ರಾಜ್ಯದಲ್ಲಿ ಭೀಕರ ಬರಗಾಲದ ನಡುವೆ ಹಿಂಗಾರು ಮಳೆ ಅನ್ನದಾತನನ್ನು ಸಂಕಷ್ಟಕ್ಕೆ ದೂಡಿದೆ. ಇತ್ತ ಸರ್ಕಾರವೂ ಜಾಣ ಮೌನಕ್ಕೆ ಜಾರಿದ್ದು, ರೈತರು ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದಾರೆ.
ರಾಣೇಬೆನ್ನೂರ ತಾಲೂಕಿನಲ್ಲಿ 2017-18ನೇ ಸಾಲಿನಲ್ಲಿ ಬೆಳೆವಿಮೆ ಪರಿಹಾರದಿಂದ ರೈತರು ವಂಚಿತರಾಗಿದ್ದು, ಇದೀಗ ಭಾರಿ ಮಳೆಯಿಂದ ಮತ್ತಷ್ಟು ಬೆಳೆ ನಾಶವಾಗಿ ಅತಂತ್ರ ಸ್ಥಿತಿಯಲ್ಲಿ ಸಿಲುಕಿದ್ದಾರೆ. ತಾಲೂಕಿನಲ್ಲಿ 1,600 ರೈತರು ರಾಜ್ಯ ಸರ್ಕಾರ ನೀಡುವ ಬೆಳೆ ವಿಮೆಯಿಂದ ವಂಚಿತರಾಗಿದ್ದಾರೆ. ಅದರಲ್ಲಿ ಜೋಹಿಸರಹರಳಹಳ್ಳಿ, ಬೇಲೂರು, ಯಕಲಾಸಪುರ ಗ್ರಾಮಗಳು ಸೇರಿದಂತೆ ಇತರೆ ಗ್ರಾಮದ ರೈತರಿಗೆ ಇಂದಿಗೂ ಬೆಳೆ ವಿಮೆ ಬಿಡುಗಡೆಯಾಗಿಲ್ಲ.
ರೈತರು ಪಿಎಮ್‌ಎಫ್‌ವೈ ಯೋಜನೆ ಅಡಿಯಲ್ಲಿ ರಾಷ್ಟ್ರೀಕೃತ ಬ್ಯಾಂಕಗಳಲ್ಲಿ ಬೆಳೆ ಮೊತ್ತವನ್ನು ಜಮಾ ಮಾಡಿದ್ದರು. ಆದರೆ, ಬ್ಯಾಂಕ್ ಸಿಬ್ಬಂದಿ ಅರ್ಜಿ ತುಂಬುವುದು ತಡವಾಗಿದೆ ಎಂದು ಅರ್ಜಿಗಳನ್ನು ವಿಲೇವಾರಿ ಮಾಡಿಲ್ಲ. ಇದರಿಂದ ಈ ರೈತರಿಗೆ ಬೆಳೆ ವಿಮೆ ಬಿಡುಗಡೆಯಾಗಿಲ್ಲ ಎಂದು ರೈತ ಸಂಘ ಆರೋಪಿಸಿದೆ.