ಹಾವೇರಿ: ಕೋವಿಡ್-19 ಪರಿಹಾರ ನಿಧಿಗೆ 25 ಸಾವಿರ ರೂಪಾಯಿ ದೇಣಿಗೆ ನೀಡುವ ಮೂಲಕ ಮೂವರು ಬಾಲಕಿಯರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸಿಎಂ ಪರಿಹಾರ ನಿಧಿಗೆ 25 ಸಾವಿರ ರೂ. ದೇಣಿಗೆ ನೀಡಿದ ಹಾವೇರಿಯ ಮೂವರು ಪುಟಾಣಿಗಳು!
ಹಾವೇರಿ ಜಿಲ್ಲೆಯ ಮೂವರು ಬಾಲಕಿಯರು ಕೋವಿಡ್-19 ಪರಿಹಾರ ನಿಧಿಗೆ 25 ಸಾವಿರ ರೂಪಾಯಿಗಳನ್ನು ಡಿಡಿ ಮೂಲಕ ದೇಣಿಗೆಯಾಗಿ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರದ ಪರಿಹಾರ ಖಾತೆಗೆ ಹಣ ಒಪ್ಪಿಸಿದ್ದಾರೆ.
25 ಸಾವಿರ ನೀಡಿದ ಮೂವರು ಬಾಲಕಿಯರು
ಜಿಲ್ಲೆಯ 7 ವರ್ಷದ ಅವನಿ, ದೀಪ್ತಿ ಹಾಗೂ 6 ವರ್ಷದ ಸನ್ನಿದಿ 25 ಸಾವಿರ ರೂ.ಗಳ ಡಿಡಿಯನ್ನು ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಿದರು.
ಪಾಲಕರು ನೀಡಿದ ಹಣವನ್ನು ಹುಂಡಿಯಲ್ಲಿ ಸಂಗ್ರಹಿಸಿದ್ದ ಪುಟಾಣಿಗಳು, ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ. ಈ ಪುಟಾಣಿಗಳ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.