ಕರ್ನಾಟಕ

karnataka

ETV Bharat / state

ಬಟ್ಟೆ ತೊಳೆಯಲು ಹೋದ ಯುವತಿ ನದಿ ಪಾಲು - Kumadvati river

ಬಟ್ಟ ತೊಳೆಯಲು ಹೋಗಿ ಯುವತಿ ನದಿಪಾಲಾದ ಘಟನೆ ರಾಣೆಬೆನ್ನೂರು ತಾಲೂಕಿನ ಮಲಕನಹಳ್ಳಿ ಗ್ರಾಮದ ಬಳಿ ನಡೆದಿದೆ.

Kumadvati river
Kumadvati river

By

Published : Aug 17, 2020, 10:48 PM IST

ಹಾವೇರಿ:ಬಟ್ಟೆ ತೊಳೆಯಲು ಹೋಗಿದ್ದ ಯುವತಿ ನದಿಪಾಲಾದ ಘಟನೆ ಹಾವೇರಿ‌ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಮಲಕನಹಳ್ಳಿ ಗ್ರಾಮದ ಬಳಿ ನಡೆದಿದೆ.

ನದಿಪಾಲಾದ ಯುವತಿಯನ್ನು (19) ವರ್ಷದ ಶಶಿಕಲಾ ಮಾಳಿಗೇರ ಎಂದು ಗುರುತಿಸಲಾಗಿದೆ. ಸೋಮವಾರ ಸಂಜೆ ಬಟ್ಟೆ ತೊಳೆಯಲು ಕುಮದ್ವತಿ ನದಿ ತೀರಕ್ಕೆ ಶಶಿಕಲಾ ಹೋಗಿದ್ದಳು ಎನ್ನಲಾಗಿದೆ. ಈ ಸಂದರ್ಭದಲ್ಲಿ ಕಾಲು ಜಾರಿ ನದಿ ಪಾಲಾಗಿದ್ದಾಳೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯನಡೆಸಿದ್ದಾರೆ. ಆದರೆ ಯುವತಿ ಶವ ಪತ್ತೆಯಾಗಿಲ್ಲ. ಹಲಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ABOUT THE AUTHOR

...view details