ರಾಣೆಬೆನ್ನೂರು: ದರ ಕುಸಿತ ಹಿನ್ನೆಲೆಯಲ್ಲಿ ರೈತರು ಬೆಳ್ಳುಳ್ಳಿಗಳನ್ನು ರಸ್ತೆ ಮೇಲೆ ಸುರಿದು ಪ್ರತಿಭಟನೆ ನಡೆಸಿದ ಘಟನೆ ನಗರದ ಎಪಿಎಂಸಿಯಲ್ಲಿ ನಡೆದಿದೆ.
ಬೆಳ್ಳುಳ್ಳಿ ದರ ದಿಢೀರ್ ಕುಸಿತ: ರಾಣೆಬೆನ್ನೂರಿನಲ್ಲಿ ರೈತರ ಪ್ರತಿಭಟನೆ - garlic rate fall down latest news
ಕಳೆದ ವಾರ ಒಂದು ಕ್ವಿಂಟಾಲ್ ಬೆಳ್ಳುಳ್ಳಿ 12 ಸಾವಿರ ರೂಪಾಯಿಗೆ ಮಾರಾಟವಾಗಿತ್ತು. ಆದ್ರೀಗ ದರ ದಿಢೀರ್ ಕುಸಿತ ಕಂಡಿದ್ದು ರೈತರು ಬೆಳ್ಳುಳ್ಳಿಗಳನ್ನು ರಸ್ತೆ ಮೇಲೆ ಸುರಿದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳ್ಳುಳ್ಳಿ ದರ ದಿಢೀರ್ ಕುಸಿತ....ರಾಣೆಬೆನ್ನೂರಿನಲ್ಲಿ ರೈತರ ಪ್ರತಿಭಟನೆ
ಬೆಳ್ಳುಳ್ಳಿ ಮಾರಾಟ ಮಾಡಲು ಬಂದಿದ್ದ ಸುರೇಶ ನಂದೀಹಳ್ಳಿ ಎಂಬ ರೈತನ ತಾಯಿ ದರ ಕುಸಿತ ಕಂಡು ಅಸ್ವಸ್ಥಗೊಂಡರು. ನಂತರ ಮಹಿಳೆಯನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ರಾಣೆಬೆನ್ನೂರು ನಗರ ಠಾಣೆ ಪೊಲೀಸರು ಭೇಟಿ ನೀಡಿ ರೈತರ ಜೊತೆ ಮಾತುಕತೆ ನಡೆಸಿದ್ದಾರೆ.