ಕರ್ನಾಟಕ

karnataka

ETV Bharat / state

ಹಾವೇರಿ: ಭಕ್ತರ ಗಮನ ಸೆಳೆಯುತ್ತಿರುವ ಆಕರ್ಷಕ ಗಣೇಶ ಮೂರ್ತಿಗಳು - Ganesha idols sales in Haveri

ಹಾವೇರಿಯ ವೀರಭದ್ರೇಶ್ವರ ದೇವಸ್ಥಾನ, ಗಣೇಶ ದೇವಸ್ಥಾನ, ಆಂಜನೇಯ, ಬಸವೇಶ್ವರ ದೇವಸ್ಥಾನಗಳು ಸೇರಿದಂತೆ ಖಾಸಗಿ ಅಂಗಡಿಗಳಲ್ಲಿ ಗಣೇಶ ಮೂರ್ತಿಗಳನ್ನು ಮಾರಾಟಕ್ಕೆ ಇಡಲಾಗಿದೆ.

ಗಣೇಶ ಮೂರ್ತಿ
ಗಣೇಶ ಮೂರ್ತಿ

By

Published : Aug 24, 2022, 10:56 PM IST

ಹಾವೇರಿ:ಗಣೇಶ ಚತುರ್ಥಿಗೆ ದಿನಗಣನೆ ಆರಂಭವಾಗಿದೆ. ಹಾವೇರಿ ಸುತ್ತಮುತ್ತ ಗ್ರಾಮಗಳಲ್ಲಿ ತಯಾರಿಸಿದ ಗಣೇಶ ಮೂರ್ತಿಗಳ ಮಾರಾಟಕ್ಕೆ ಕಲಾವಿದರು ಜಿಲ್ಲೆಗಳಿಗೆ ಆಗಮಿಸುತ್ತಿದ್ದಾರೆ. ಇಲ್ಲಿನ ವೀರಭದ್ರೇಶ್ವರ ದೇವಸ್ಥಾನ, ಗಣೇಶ ದೇವಸ್ಥಾನ, ಆಂಜನೇಯ, ಬಸವೇಶ್ವರ ದೇವಸ್ಥಾನಗಳು ಸೇರಿದಂತೆ ಖಾಸಗಿ ಅಂಗಡಿಗಳಲ್ಲಿ ಗಣೇಶ ಮೂರ್ತಿಗಳನ್ನು ಮಾರಾಟಕ್ಕೆ ಇಡಲಾಗಿದೆ.

ಭಕ್ತರ ಇಷ್ಟಾರ್ಥದಂತೆ ಕಲಾವಿದರು ನಾನಾ ಬಗೆಯ ಗಣೇಶ ಮೂರ್ತಿಗಳನ್ನು ತಯಾರಿಸಿಕೊಂಡು ಬಂದಿದ್ದಾರೆ. ಗಣೇಶನ ಮೂರ್ತಿಗೆ ಕೆಲವೆಡೆ ಅಂತಿಮ ಸ್ಪರ್ಶ ನೀಡುವ ಕೆಲಸ ನಡೆಯುತ್ತಿದೆ. ತಿರುಪತಿ ತಿಮ್ಮಪ್ಪ ಗಣಪ, ಸಾಯಿಬಾಬಾ ಗಣಪ, ಇಡಗುಂಜಿ ಗಣಪ, ಅಯೋಧ್ಯಾ ರಾಮಮಂದಿರ ಇರುವ ಗಣೇಶ ವಿಗ್ರಹಗಳು ಭಕ್ತರ ಗಮನ ಸೆಳೆಯುತ್ತಿವೆ.

ಕಲಾವಿದ ಶಂಕರಾಚಾರ್ಯ ಕಮ್ಮಾರ ಅವರು ಮಾತನಾಡಿದರು

ಆಂಜನೇಯ ವಾಹನ ಗಣೇಶ, ಮೂಷಿಕವಾಹನ, ನಂದಿವಾಹನ, ಅಶ್ವವಾಹನ, ಗಜವಾಹನ ಸೇರಿದಂತೆ ವಿವಿಧ ವಾಹನಗಳ ಮೇಲೆ ಆಸೀನರಾಗಿರುವ ಗಣೇಶ ಮೂರ್ತಿಗಳು ಭಕ್ತರನ್ನು ಸೆಳೆಯುತ್ತಿವೆ. ಪರಿಸರ ಪ್ರೇಮಿ ಗಣಪತಿಗಳನ್ನು ಸಹ ಅಧಿಕ ಸಂಖ್ಯೆಯಲ್ಲಿ ತಯಾರಿಸಲಾಗಿದೆ. ಭಕ್ತರ ಇಷ್ಟಾರ್ಥದಂತೆ ಅವರು ಬಯಸುವ ಗಣೇಶ ಮೂರ್ತಿಗಳನ್ನು ತಯಾರಿಸಲಾಗಿದೆ ಎಂದು ಕಲಾವಿದರು ತಿಳಿಸಿದ್ದಾರೆ.

ಐದು ಸಾವಿರದಿಂದ ಲಕ್ಷದವರೆಗೆ ಬೆಲೆ: ಮನೆಯಲ್ಲಿ ಸ್ಥಾಪಿಸುವ ಗಣೇಶ ಮೂರ್ತಿಗಳಿಗೆ 500 ರೂಪಾಯಿಯಿಂದ ಹಿಡಿದು ಐದು ಸಾವಿರ ರೂಪಾಯಿವರಗೆ ದರ ನಿಗದಿ ಮಾಡಲಾಗಿದೆ. ಅದೇ ರೀತಿ ಸಾರ್ವಜನಿಕರ ಸ್ಥಳಗಳಲ್ಲಿ ಸ್ಥಾಪಿಸುವ ಗಣೇಶ ಮೂರ್ತಿಗಳಿಗೆ ಐದು ಸಾವಿರದಿಂದ ಲಕ್ಷದವರೆಗೆ ನಿಗದಿ ಮಾಡಲಾಗಿದೆ. ಸರ್ಕಾರದ ಆದೇಶದಂತೆ ಐದು ಅಡಿಯವರೆಗೆ ಗಣೇಶ ಮೂರ್ತಿಗಳನ್ನು ತಯಾರಿಸಲಾಗಿದೆ.

ಓದಿ:ಗುತ್ತಿಗೆದಾರರ ಆರೋಪದ ಹಿಂದೆ ಕಾಂಗ್ರೆಸ್‌ ರಾಜಕೀಯ ಇದೆ : ಸಚಿವ ಸುಧಾಕರ್‌

ABOUT THE AUTHOR

...view details