ಕರ್ನಾಟಕ

karnataka

ETV Bharat / state

ಗಾಂಧಿ ಸೇವಾ ಪ್ರಶಸ್ತಿ ಪುರಸ್ಕೃತೆ ಚೆನ್ನಮ್ಮ ಹಳ್ಳಿಕೇರಿ ವಿಧಿವಶ! - Chennamma Hallikeri passes away

ಗಾಂಧಿವಾದಿ ಚೆನ್ನಮ್ಮ ಹಳ್ಳಿಕೇರಿ ನಿಧನರಾಗಿದ್ದಾರೆ.

Gandhi Seva Awardee Chennamma Hallikeri passes away
ಗಾಂಧಿ ಸೇವಾ ಪ್ರಶಸ್ತಿ ಪುರಸ್ಕೃತೆ ಚೆನ್ನಮ್ಮ ಹಳ್ಳಿಕೇರಿ ವಿಧಿವಶ

By ETV Bharat Karnataka Team

Published : Dec 21, 2023, 2:24 PM IST

ಹಾವೇರಿ: ಖ್ಯಾತ ಗಾಂಧಿವಾದಿ ಹಾವೇರಿ ತಾಲೂಕಿನ ಹೊಸರಿತ್ತಿಯ ಚೆನ್ನಮ್ಮ ಹಳ್ಳಿಕೇರಿ ಅವರು ವಿಧಿವಶರಾಗಿದ್ದಾರೆ. ಮಹಾರಾಷ್ಟ್ರದ ವಾರ್ಧಾ ಸಮೀಪದ ಪವನಾರಿನ ಗಾಂಧಿ ಆಶ್ರಮದಲ್ಲಿ ಚೆನ್ನಮ್ಮ ಹಳ್ಳಿಕೇರಿ ಕೊನೆಯುಸಿರೆಳೆದಿದ್ದಾರೆ. ಗಣ್ಯರು ಸೇರಿದಂತೆ ಜನಸಾಮಾನ್ಯರು, ಚೆನ್ನಮ್ಮ ಅವರ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ.

ಆಚಾರ್ಯ ವಿನೋಬಾ ಭಾವೆಯವರ ಶಿಷ್ಯೆ, ಒಡನಾಡಿಯಾಗಿ ಚೆನ್ನಮ್ಮ ಹಳ್ಳಿಕೇರಿ ಅವರು ದೇಶ ಸೇವೆಯಲ್ಲಿ ನಿರತರಾಗಿದ್ದರು. ಗಾಂಧಿ ಸೇವಾ ಪ್ರಶಸ್ತಿ ಪುರಸ್ಕೃತೆಯೂ ಆಗಿರುವ ಇವರು ಬುಧವಾರ ರಾತ್ರಿ 8.40ಕ್ಕೆ ನಿಧನರಾಗಿದ್ದಾರೆ. 92ರ ಹರೆಯದ ಚೆನ್ನಮ್ಮನವರು ವಯೋಸಹಜ ಖಾಯಲೆಗಳಿಂದ ಬಳಲುತ್ತಿದ್ದರು. ಆಚಾರ್ಯ ಗಾಂಧಿ ಪ್ರಣೀತ ವಿಚಾರ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. 1931ರಲ್ಲಿ ಜನಿಸಿದ್ದ ಇವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಆಚಾರ್ಯ ವಿನೋಬಾ ಭಾವೆಯವರ ಭೂದಾನ ಚಳವಳಿಯಲ್ಲಿ ಚೆನ್ನಮ್ಮ ಹಳ್ಳಿಕೇರಿ ಮಹತ್ತರ ಪಾತ್ರ ವಹಿಸಿದ್ದರು.

ಸಚಿವ ಶಿವರಾಜ ತಂಗಡಗಿ ಸಂತಾಪ: ಹಿರಿಯ ಸರ್ವೋದಯ ಕಾರ್ಯಕರ್ತೆ ಶ್ರೀಮತಿ ಚೆನ್ನಮ್ಮ ಹಳ್ಳಿಕೇರಿಯವರ ನಿಧನಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಸಂತಾಪ ಸೂಚಿಸಿದ್ದಾರೆ. ಹಾವೇರಿ ಜಿಲ್ಲೆಯ ಹೊಸರಿತ್ತಿ ಗ್ರಾಮದಲ್ಲಿ ಜನಿಸಿದ್ದ ಚೆನ್ನಮ್ಮ ಹಳ್ಳಿಕೇರಿಯವರು ತಮ್ಮ ನಿಷ್ಕಳಂಕ ಜೀವನಶೈಲಿ ಹಾಗೂ ಸಾಮಾಜಿಕ ಚಿಂತನೆಗಳಿಂದ ಎಲ್ಲರ ಗಮನ ಸೆಳೆದಿದ್ದರು. ಪ್ರಗತಿಶೀಲ ಚಳವಳಿಗಳಲ್ಲಿ ಭಾಗಿಯಾಗಿದ್ದ ಅವರು ವಿನೋಬಾ ಭಾವೆಯವರ ಅನುಯಾಯಿಯಾಗಿ ಭೂದಾನ ಚಳವಳಿಯಲ್ಲಿ ಭಾಗಿಯಾಗಿದ್ದರು. ನಂತರ ವಿನೋಬಾ ಭಾವೆಯವರು ಸ್ಥಾಪಿಸಿದ್ದ ವಾರ್ಧಾ ಬಳಿಯ ಪೌನಾರ್ ಆಶ್ರಮದಲ್ಲಿಯೇ ವಾಸವಾಗಿದ್ದರು. ಅವರಿಗೆ 2016ರಲ್ಲಿ ಕರ್ನಾಟಕ ಸರ್ಕಾರದ ವತಿಯಿಂದ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ದೊರೆತಿತ್ತು. ಅವರು ಸಮಾಜಕ್ಕೆ ವಿಶೇಷವಾಗಿ ಮಹಿಳೆಯರಿಗೆ ಸ್ಫೂರ್ತಿದಾಯಕವಾಗಿ ಬದುಕಿದ್ದವರು. ಅವರ ಆತ್ಮಕ್ಕೆ ಭಗವಂತ ಸದ್ಗತಿ ದೊರಕಿಸಲಿ ಎಂದು ಸಚಿವರು ತಮ್ಮ ಸಂತಾಪ ಸಂದೇಶದಲ್ಲಿ ಸಚಿವರು ತಿಳಿಸಿದ್ದಾರೆ.

ಇನ್ನು ಚೆನ್ನಮ್ಮ ನಿಧನಕ್ಕೆ ಗಾಂಧಿವಾದಿಗಳು ಸಂತಾಪ ಸೂಚಿಸುತ್ತಿದ್ದಾರೆ. ಅವರ ಹೋರಾಟದ ಬದುಕನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:ಯುವನಿಧಿ ಯೋಜನೆ ನೋಂದಣಿಗೆ ಡಿ.26 ರಂದು ಚಾಲನೆ; ಅರ್ಹರು ಯಾರು? ಅರ್ಜಿ ಸಲ್ಲಿಸುವುದೇಗೆ?

ABOUT THE AUTHOR

...view details