ಕರ್ನಾಟಕ

karnataka

ETV Bharat / state

ರಾಜ್ಯದೆಲ್ಲೆಡೆ ಬಾಪೂಜಿ 150ನೇ ಜನ್ಮ ಜಯಂತಿ ಸಂಭ್ರಮ: ಮಹಾತ್ಮನ ಗುಣಗಾನ, ಮಿಂಚಿದ ಚಿಣ್ಣರು - ಬಿಳಿಟೋಪಿ ಧರಿಸಿ ವಿಶೇಷವಾಗಿ ರಾಷ್ಟ್ರಪಿತನಿಗೆ ನಮನ

ರಾಣೆಬೆನ್ನೂರು, ತುಮಕೂರು ಹಾಗೂ ಚಾಮರಾಜನಗದಲ್ಲಿ ಗಾಂಧೀಜಿ 150ನೇ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಗಿದೆ.

ಬಾಪು ಜಯಂತಿ ಸ್ಪೆಷಲ್

By

Published : Oct 2, 2019, 9:54 PM IST

ರಾಣೆಬೆನ್ನೂರು/ತುಮಕೂರು/ಚಾಮರಾಜನಗರ:ಗಾಂಧೀಜಿ ಜನ್ಮದಿನದ ಅಂಗವಾಗಿ ರಾಜ್ಯದೆಲ್ಲೆಡೆ ವಿಶೇಷ ಕಾರ್ಯಕ್ರಮಗಳು ಸಂಭ್ರಮದಿಂದ ಜರುಗಿದವು.

ರಾಣೆಬೆನ್ನೂರ ನಗರಸಭಾ ಸದಸ್ಯರು ಹಾಗೂ ಅಧಿಕಾರಿಗಳು ಬಿಳಿ ಟೋಪಿ ಧರಿಸಿ ವಿಶೇಷವಾಗಿ ರಾಷ್ಟ್ರಪಿತನಿಗೆ ನಮನ ಸಲ್ಲಿಸಿದ್ರು. ನಗರಸಭೆ ಆಯುಕ್ತ ಎನ್.ಮಹಾಂತೇಶ, ಮಂಜುಳಾ ಮುಂಡಾಸದ, ನಗರಸಭಾ ಸದಸ್ಯರಾದ ಪುಟ್ಟಪ್ಪ ಮರಿಯಮ್ಮನವರ, ನೂರೂಲ್ಲಾ ಖಾಜಿ, ಪ್ರಕಾಶ ಬುರಡಿಕಟ್ಟಿ, ರಾಜು ಅಡ್ಮನಿ, ಜಯಶ್ರೀ ಪಿಸೆ, ಮಂಜುಳಾ ಹತ್ತಿ, ನಿಂಗರಾಜ ಕೋಡಿಹಳ್ಳಿ ಸೇರಿದಂತೆ ಮುಂತಾದವರು ಹಾಜರಿದ್ದರು.

ತುಮಕೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲಭವನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ 150ನೇ ಗಾಂಧಿ ಜಯಂತಿಯನ್ನು ಆಚರಿಸಲಾಯಿತು.

ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಪಾಪು ಬಾಪು ಎಂಬ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಶಾಸಕ ಜ್ಯೋತಿಗಣೇಶ್, ಗಾಂಧೀಜಿಯವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಮೋದಿಯವರು ಕೆಲಸ ನಿರ್ವಹಿಸುತ್ತಿದ್ದಾರೆ. ಕೇವಲ ಕಾರ್ಯಕ್ರಮಗಳನ್ನು ರೂಪಿಸಿದರೆ ಸಮಾಜ ಬದಲಾಗುವುದಿಲ್ಲ. ಈ ನಿಟ್ಟಿನಲ್ಲಿ ನಮ್ಮ ಮನಸ್ಸುಗಳು ಪರಿವರ್ತನೆಯಾಗಬೇಕು,ಇಂದು ಗಾಂಧಿ ಜನ್ಮದಿನಾಚರಣೆ ಮಾಡುತ್ತಿರುವುದು ಹೆಮ್ಮೆಯ ವಿಚಾರ. ಗಾಂಧೀಜಿಯವರ ತತ್ವಾದರ್ಶಗಳನ್ನು ನಾವೆಲ್ಲರೂ ಅನುಸರಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸಿಇಓ ಶುಭಾ ಕಲ್ಯಾಣ್ ಮಾತನಾಡಿ, ಗಾಂಧೀಜಿಯವರು ಮೊದಲು ತಮ್ಮಲ್ಲಿ ಬದಲಾವಣೆಯಾಗಬೇಕು ಆನಂತರ ಸಮಾಜದಲ್ಲಿ ಬದಲಾವಣೆಯಾಗಬೇಕು ಎಂಬುದನ್ನು ಅರಿತು ಸ್ವಾತಂತ್ರ ತಂದುಕೊಟ್ಟವರು. ಸರಳತೆ, ಸತ್ಯ, ಅಹಿಂಸೆ, ಶ್ರದ್ಧೆ ಇವೆಲ್ಲವನ್ನು ಜೀವನದಲ್ಲಿ ಅಳವಡಿಸಿಕೊಂಡು ಶಾಂತಿಯುತವಾಗಿ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟರು. ಸ್ವಚ್ಛತೆಯ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿಯೂ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದರು.

ಬಾಪು ಜಯಂತಿ ಸ್ಪೆಷಲ್

ಗಡಿಜಿಲ್ಲೆ ಚಮರಾಜನಗರಾದ್ಯಂತ ಮಹಾತ್ಮ ಗಾಂಧೀಜಿ 150 ನೇ ಜಯಂತಿಯನ್ನು ಸಡಗರದಿಂದ ಆಚರಿಸಲಾಯಿತು. ಶಾಲಾ ವಿದ್ಯಾರ್ಥಿಗಳು ಕೋಲು ಹಿಡಿದು ಗಾಂಧಿ ವೇಷ ತೊಟ್ಟಿದ್ದು ಎಲ್ಲರ ಗಮನ ಸೆಳೆಯಿತು. ಬಿಳಿ ಬಣ್ಣ ಹಚ್ಚಿಕೊಂಡು, ಕನ್ನಡಕ ಧರಿಸಿ ಚರಕ ಹಿಡಿದ ಮಕ್ಕಳು ಪುಟಾಣಿ ಗಾಂಧಿಗಳಾಗಿದ್ದರು. ಜೊತೆಗೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಚಾಮರಾಜೇಶ್ವರ ದೇಗುಲ ಮುಂಭಾಗದಿಂದ ಜಿಲ್ಲಾ ಕಾಂಗ್ರೆಸ್ ಕಚೇರಿವರೆಗೆ ಪಾದಯಾತ್ರೆ ನಡೆಸಿದರು. ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ‌ ಹೊಂಗಳ್ಳಿ ಶಾಲೆಯಲ್ಲಿ ಅರ್ಥಪೂರ್ಣವಾಗಿ ಬಾಪೂಜಿ ಜಯಂತಿ ಆಚರಿಸಲಾಯಿತು.

ಶಾಲಾ ಮುಖ್ಯಶಿಕ್ಷಕ ಮಹದೇವಸ್ವಾಮಿ ನೇತೃತ್ವದಲ್ಲಿ ಚಿಣ್ಣರು ಹಾರ್ಮೋನಿಯಂ, ತಾಳ ಹಿಡಿದು ಗಾಂಧೀಜಿ ಇಷ್ಟಪಡುತ್ತಿದ್ದ ಮತ್ತು ಸಬರಮತಿ ಆಶ್ರಮದಲ್ಲಿ ಪಠಿಸುವ ಭಜನೆಗಳನ್ನು ಚಿಣ್ಣರು ಸುಶ್ರಾವ್ಯವಾಗಿ ಹಾಡಿದರು.

ABOUT THE AUTHOR

...view details