ರಾಣೆಬೆನ್ನೂರು:ಸಹಕಾರ ಇಲಾಖೆ ಅಧೀನದಲ್ಲಿ ನಡೆಯುತ್ತಿರುವ ಮಹಿಷಾಸುರ ಮರ್ದಿನಿ ಕೋ ಆಪರೇಟಿವ್ ಬ್ಯಾಂಕ್ ವ್ಯವಸ್ಥಾಪಕ, ಹಣ ದುರುಪಯೋಗ ಮಾಡಿದ್ದಾರೆ ಎಂದು ಬ್ಯಾಂಕ್ ನಿರ್ದೇಶಕ ಬಾಬಣ್ಣ ಕಾವಡಿ ಆರೋಪಿಸಿದ್ದಾರೆ.
ಮಹಿಷಾಸುರ ಮರ್ದಿನಿ ಕೋ ಆಪರೇಟಿವ್ ಬ್ಯಾಂಕ್ನಲ್ಲಿ ಅವ್ಯವಹಾರ... ಮ್ಯಾನೇಜರ್ ಅಮಾನತು - Irregularity by the director
2017-18ನೇ ಸಾಲಿನ ಲೆಕ್ಕಪರಿಶೋಧನ ಸಮಯದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಆದ್ದರಿಂದ, ತಕ್ಷಣ ಬ್ಯಾಂಕ್ ಆಡಳಿತ ಮಂಡಳಿ, ವ್ಯವಸ್ಥಾಪಕ ಸುರೇಶ ಬಸವರಾಜ ಹೊಸಮನಿಯನ್ನು ಅಮಾನತು ಮಾಡಿ, ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದ್ದರಿಂದ ಯಾರು ಅಪಪ್ರಚಾರಗಳಿಗೆ ಕಿವಿಗೊಡದಂತೆ ನಿರ್ದೇಶಕರು ಮನವಿ ಮಾಡಿದ್ದಾರೆ.
ನಗರದಲ್ಲಿ ಮಾತನಾಡಿ, 2001ರಲ್ಲಿ ಪ್ರಾರಂಭವಾದ ಬ್ಯಾಂಕಿನಲ್ಲಿ ಸಾವಿರಾರು ಷೇರುದಾರರು ಇದ್ದಾರೆ, ನಂಬಿಕೆಯ ಮೇಲೆ ಗ್ರಾಹಕರು ಹಣ ಹೂಡಿದ್ದಾರೆ. ಆದರೆ ಬ್ಯಾಂಕ್ ವ್ಯವಸ್ಥಾಪಕ ಜನರ ಹಣವನ್ನು ದುರಪಯೋಗ ಮಾಡಿಕೊಂಡಿದ್ದು, ಸುಮಾರು 34,22,660 ರೂ. ಹಣ ದುರುಪಯೋಗವಾಗಿದೆ. 2017-18ನೇ ಸಾಲಿನ ಲೆಕ್ಕಪರಿಶೋಧನ ಸಮಯದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಆದ್ದರಿಂದ, ತಕ್ಷಣ ಬ್ಯಾಂಕ್ ಆಡಳಿತ ಮಂಡಳಿ, ವ್ಯವಸ್ಥಾಪಕ ಸುರೇಶ ಬಸವರಾಜ ಹೊಸಮನಿಯನ್ನು ಅಮಾನತು ಮಾಡಿ, ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದರು.
ಇದಾದ ಬಳಿಕ ಬ್ಯಾಂಕ್ ವ್ಯವಸ್ಥಾಪಕರು ತಪ್ಪನ್ನು ಒಪ್ಪಿಕೊಂಡು ಈಗಾಗಲೇ 18 ಲಕ್ಷ ರೂ. ಹಿಂದಿರುಗಿಸಿದ್ದಾರೆ. ಇನ್ನುಳಿದ ಹಣವನ್ನು ಹಿಂದುರಿಗಿಸಲಾಗುವುದು ಎಂದು ಒಪ್ಪಿಗೆ ನೀಡಿದ್ದಾರೆ. ಆದರೆ ಆಡಳಿತ ಮಂಡಳಿಯ ಕೆಲ ನಿರ್ದೇಶಕರು ಬ್ಯಾಂಕ್ ವಿರುದ್ದ ಅಪಪ್ರಚಾರ ಮಾಡುತ್ತಿದ್ದಾರೆ. ಅವ್ಯವಹಾರದ ಬಗ್ಗೆ ಅಧಿಕಾರಿಗಳಿಗೆ, ಪೋಲಿಸ್ ಇಲಾಖೆಗೆ ಮಾಹಿತಿ ನೀಡಲಾಗಿದೆ. ಸಾರ್ವಜನಿಕರು ಹಾಗೂ ಷೇರುದಾರರು ಅಪಪ್ರಚಾರಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದರು.