ಕರ್ನಾಟಕ

karnataka

ETV Bharat / state

ದುಬಾರಿ ಮದ್ಯ ಖರೀದಿಸಿ ಆನ್​ಲೈನ್ ಪೇಮೆಂಟ್ ಮಾಡುವುದಾಗಿ ವಂಚನೆ: ಇಬ್ಬರು ಟೆಕ್ಕಿಗಳು ಅಂದರ್​​​ - online fraud

ಬಾರಿನ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಇಬ್ಬರ ಕೃತ್ಯ ಬಯಲಾಗಿದ್ದು, ಪೊಲೀಸರು ತನಿಖೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಇದಲ್ಲದೆ ಹಾವೇರಿಯ ಹಲವು ಬಾರ್‌ಗಳಲ್ಲಿ ಈ ಆರೋಪಿಗಳು ಇದೇ ರೀತಿಯ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದ್ದು, ಬಾರ್ ಮಾತ್ರವಲ್ಲದೆ ಮೊಬೈಲ್​ ಹಾಗೂ ಬಟ್ಟೆ ಅಂಗಡಿಗಳಲ್ಲೂ ಇಬ್ಬರೂ ಈ ರೀತಿಯ ವಂಚನೆ ಎಸಗಿದ್ದಾರೆ ಎನ್ನಲಾಗಿದೆ.

fraud-for-buying-expensive-liquor-and-making-online-payment
ದುಬಾರಿ ಮದ್ಯ ಖರೀದಿಸಿ ಆನ್​ಲೈನ್ ಪೇಮೆಂಟ್ ಮಾಡುವುದಾಗಿ ವಂಚನೆ

By

Published : Jan 23, 2021, 8:55 PM IST

ಹಾವೇರಿ: ಬಾರ್​​ನಲ್ಲಿ ದುಬಾರಿ ಮದ್ಯ ಖರೀದಿಸಿ ಆನ್​​​ಲೈನ್ ಮೂಲಕ ಹಣ ಪಾವತಿಸುವ ನಾಟಕವಾಡಿ ವಂಚಿಸುತ್ತಿದ್ದ ಇಬ್ಬರು ಟೆಕ್ಕಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಹಾವೇರಿಯ ನವೀನ್ ಬುಕ್ಕಶೇಟ್ಟರ್ ಮತ್ತು ಸಿದ್ದರಾಜು ಹಿರೇಮಠ ಎಂದು ಗುರುತಿಸಲಾಗಿದೆ.

ದುಬಾರಿ ಮದ್ಯ ಖರೀದಿಸಿ ಆನ್​ಲೈನ್ ಪೇಮೆಂಟ್ ಮಾಡುವುದಾಗಿ ವಂಚನೆ

ಇಬ್ಬರು ಚಿದಾನಂದ ಎಂಬುವರ ಬಾರಿಗೆ ತೆರಳಿ ಮದ್ಯ ಖರೀದಿಸಿದ್ದಾರೆ. ಬಳಿಕ ಫೋನ್​ ಪೇ ಮಾಡುತ್ತೇವೆ ಎಂದು ಹೇಳಿ ಹಳೆಯ ಹಣ ಪಾವತಿ ಫೋಟೋ ತೋರಿಸಿ ಅಲ್ಲಿಂದ ಪರಾರಿಯಾಗಿದ್ದರಂತೆ. ಇದೀಗ ಇಬ್ಬರ ಕೃತ್ಯ ಬೆಳಕಿಗೆ ಬಂದಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಾರ್​ನಲ್ಲಿ ಮದ್ಯ ಖರೀದಿಸಿದ್ದ ಆರೋಪಿ

ಬಾರಿನ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಇಬ್ಬರ ಕೃತ್ಯ ಬಯಲಾಗಿದ್ದು, ಪೊಲೀಸರು ತನಿಖೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಇದಲ್ಲದೆ ಹಾವೇರಿ ಹಲವು ಬಾರ್‌ಗಳಲ್ಲಿ ಈ ಆರೋಪಿಗಳು ಇದೇ ರೀತಿಯ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದ್ದು, ಬಾರ್ ಮಾತ್ರವಲ್ಲದೆ ಮೊಬೈಲ್​ ಹಾಗೂ ಬಟ್ಟೆ ಅಂಗಡಿಗಳಲ್ಲೂ ಇಬ್ಬರೂ ಈ ರೀತಿಯ ವಂಚನೆ ಎಸಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಹಾವೇರಿ ಹುಕ್ಕೇರಿಮಠ ಜಾತ್ರೆ ಆರಂಭ : ಅದ್ಧೂರಿ ಆಚರಣೆಗೆ ಬ್ರೇಕ್

ABOUT THE AUTHOR

...view details