ಹಾವೇರಿ:ಕೇರಳ, ಕರ್ನಾಟಕ, ಮಹಾರಾಷ್ಟ್ರದಲ್ಲಿ ನಡೆದ ಹಲವು ಡಕಾಯಿತಿ ಕೇಸುಗಳಲ್ಲಿ ಪಾಲ್ಗೊಂಡಿದ್ದ ನಾಲ್ವರು ಅಂತಾರಾಜ್ಯ ಡಕಾಯಿತರನ್ನು ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ನಗದು ಸೇರಿ 1 ಕೋಟಿ 8 ಲಕ್ಷ 44 ಸಾವಿರ ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೇರಳದ ಅಂತೋನಿ(22), ಅಬ್ಬಾಸ್(38), ನಿಶಾದ ಬಾಬು(38), ಭರತ್ ಕುಮಾರ್(29) ಬಂಧಿತರು.
ಹಾವೇರಿ: ನಾಲ್ವರು ಅಂತಾರಾಜ್ಯ ಡಕಾಯಿತರ ಬಂಧನ - team of four interstate bandits by haveri police
ಕೇರಳ, ಕರ್ನಾಟಕ ಹಾಗು ಮಹಾರಾಷ್ಟ್ರದಲ್ಲಿ ನಡೆದ ಹಲವು ಡಕಾಯಿತಿ ಪ್ರಕರಣಗಳಲ್ಲಿ ಪಾಲ್ಗೊಂಡಿದ್ದ ನಾಲ್ವರು ಅಂತಾರಾಜ್ಯ ಡಕಾಯಿತರನ್ನು ಹಾವೇರಿ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.

ನಾಲ್ವರು ಅಂತರಾಜ್ಯ ಡಕಾಯಿತರ ಬೇಟೆಯಾಡಿದ ಹಾವೇರಿ ಪೊಲೀಸರು
ಹಾವೇರಿ ಎಸ್ಪಿ ಹನುಮಂತರಾಯ
ಕಳೆದ ಕೆಲದಿನಗಳ ಹಿಂದೆ ನಡೆದ ಯಲ್ಲಾಪುರದ ದರೋಡೆ ಪ್ರಕರಣದಲ್ಲಿ ಆರೋಪಿಗಳು ಪಾಲ್ಗೊಂಡಿದ್ದರು. ಬಂಧಿತರಿಂದ ಸುಮಾರು 50 ಲಕ್ಷ ರೂಪಾಯಿ ನಗದು ಮತ್ತು 58 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ತಂಡದ ಪ್ರಮುಖ ಆರೋಪಿ ಸೇರಿದಂತೆ ಇತರೆ ಸದಸ್ಯರ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ಹಾವೇರಿ ಎಸ್ಪಿ ಹನುಮಂತರಾಯ ತಿಳಿಸಿದರು.
ಇದನ್ನೂ ಓದಿ:ರೂಂ ಕೊಡಿಸುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ ಯತ್ನ: ಆರೋಪಿ ಸೆರೆ
Last Updated : Dec 23, 2022, 10:23 PM IST