ಹಾವೇರಿ: ಮುರುಘಾಶ್ರೀ ಪೋಕ್ಸೋ ಪ್ರಕರಣ ಹಾಗೂ ಮಹಿಳೆಯರ ಆಡಿಯೋ ವೈರಲ್ ವಿಚಾರದ ಘಟನೆಗಳು ಬಹಳ ನೋವು ಎನಿಸಿವೆ ಎಂದು ವಿಧಾನಸಭೆ ಮಾಜಿ ಸ್ಫೀಕರ್ ಕೆ ಬಿ ಕೋಳಿವಾಡ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರಲ್ಲಿ ಮಾತನಾಡಿದ ಅವರು, ಯಾವುದು ಸತ್ಯ? ಯಾವುದು ಅಸತ್ಯ ಅಂತಾ ಹೇಳೋಕೆ ನಾನು ಅಸಮರ್ಥ ಎಂದು ತಿಳಿಸಿದರು. ಪೊಲೀಸ್ ತನಿಖೆ ನಡೆದಿದೆ. ರಿಸಲ್ಟ್ ಏನು ಬರುತ್ತೋ ನೋಡೋಣ ಎಂದು ತಿಳಿಸಿದರು. ಈ ಪ್ರಕರಣಗಳಲ್ಲಿ ಸರ್ಕಾರದ ನಡೆ ಬಗ್ಗೆ ಸಾಕಷ್ಟು ಜನ ಕಮೆಂಟ್ ಮಾಡಿದ್ದಾರೆ. ನಾನು ಆ ಲೆವಲ್ಗೆ ಇಳಿಯೋಕೆ ಹೋಗಲ್ಲ. ತನಿಖೆ ನಡೆದಿದೆ. ಸತ್ಯಾಸತ್ಯತೆ ಹೊರಬರಲಿ ಎಂದರು.
ಇದೇ ವೇಳೆ ಬಿಜೆಪಿ ಸರ್ಕಾರ ಕಾಂಗ್ರೆಸ್ ಸರ್ಕಾರದ ಹಗರಣಗಳ ತನಿಖೆ ಮಾಡುವ ವಿಚಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇಷ್ಟು ದಿನ ಯಾಕೆ ಸುಮ್ಮನೆ ಕೂತಿದ್ರಿ? ನಿಮ್ಮ ಕೈನಲ್ಲೇ ಸರ್ಕಾರ ಇತ್ತಲ್ವಾ? ಕಾಂಗ್ರೆಸ್ ನವರು ನಾಲ್ವತ್ತು ಫರ್ಸೆಂಟೇಜ್ ಭ್ರಷ್ಟಾಚಾರ ಬಯಲಿಗೆಳೆದ ಮೇಲೆ ಅವರದ್ದೂ ತೆಗೆಯುತ್ತೇನೆ ಅಂತಿದ್ದಾರೆ.
ಮಾಜಿ ಸ್ಫೀಕರ್ ಕೆ ಬಿ ಕೋಳಿವಾಡ ಅವರು ಮಾತನಾಡಿದರು ನಮ್ಮ ಚೀಲದಲ್ಲಿ ಬುಸ್ ಬುಸ್ ನಾಗಪ್ಪ ಐತಿ, ತೆಗೆಯುತ್ತೇವೆ ಅಂದರೆ ತೆಗೆಯಿರಿ ಯಾರು ಬೇಡ ಅಂತಾರೆ. ಅಧಿಕಾರಕ್ಕೆ ಇದ್ದಾಗಲೆ ಏನೂ ಮಾಡೋಕೆ ಆಗಲಿಲ್ಲ. ಈಗ ಕೊನೆ ಹಂತದಲ್ಲಿ ಬಂದು ತೆಗೆಯುತ್ತೇವೆ ಅಂದರೆ ಹೆದರೋರ್ಯಾರು? ನಮ್ಮ ಕಾಂಗ್ರೆಸ್ಗೆ ಯಾವುದೇ ಹೆದರಿಕೆ ಇಲ್ಲ ಎಂದು ತಿಳಿಸಿದರು.
ಓದಿ:ಮುರುಘಾ ಮಠದ ಶಿವಮೂರ್ತಿ ಶ್ರೀಗಳಿಗೆ ಸೆ. 14ರವರೆಗೆ ನ್ಯಾಯಾಂಗ ಬಂಧನ