ಕರ್ನಾಟಕ

karnataka

ETV Bharat / state

ಸಿಎಂ ಬೊಮ್ಮಾಯಿ ಅವರು ಅಸಮರ್ಥ ಮುಖ್ಯಮಂತ್ರಿ: ಕೆ.ಬಿ.ಕೋಳಿವಾಡ್ - ಬಸವರಾಜ್ ಬೊಮ್ಮಾಯಿ ವಿರುದ್ದ ಕೆ ಬಿ ಕೋಳಿವಾಡ್​ ಆಕ್ರೋಶ

ಕೆ.ಎಸ್. ಈಶ್ವರಪ್ಪ ಅವರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆದುಕೊಂಡು ಬಂಧಿಸದಿದ್ದರೆ ಕಾಂಗ್ರೆಸ್ ದೇಶ, ರಾಜ್ಯ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ವಿಧಾನಸಭೆ ಮಾಜಿ ಸ್ಪೀಕರ್ ಕೆ. ಬಿ ಕೋಳಿವಾಡ್​ ಅವರು ತಿಳಿಸಿದ್ದಾರೆ.

ಮಾಜಿ ಸ್ಪೀಕರ್ ಕೆ. ಬಿ ಕೋಳಿವಾಡ್
ಮಾಜಿ ಸ್ಪೀಕರ್ ಕೆ. ಬಿ ಕೋಳಿವಾಡ್

By

Published : Apr 13, 2022, 10:58 PM IST

ಹಾವೇರಿ: ಸಿಎಂ ಬಸವರಾಜ್ ಬೊಮ್ಮಾಯಿ ಅವರು ಅಸಮರ್ಥ ಮುಖ್ಯಮಂತ್ರಿ ಎಂದು ವಿಧಾನಸಭೆ ಮಾಜಿ ಸ್ಪೀಕರ್ ಕೆ. ಬಿ ಕೋಳಿವಾಡ್ ಅವರು ಆರೋಪಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಿಎಂ ಬಸವರಾಜ್ ಬೊಮ್ಮಾಯಿ ಸಂತೋಷ ಪಾಟೀಲ್​ ಪ್ರಕರಣದಲ್ಲಿ ಆರೋಪಿ ಸಚಿವ ಕೆ. ಎಸ್ ಈಶ್ವರಪ್ಪ ಜೊತೆ ನೇರಾ ನೇರ ಮಾತನಾಡಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎನ್ನುತ್ತಿದ್ದಾರೆ. ಅವರು ಈ ರೀತಿ ಹೇಳುತ್ತಿರುವುದು ದಡ್ಡತನ, ಅವಿವೇಕತನ. ಅವರೊಬ್ಬ ಅಸಮರ್ಥ ಮುಖ್ಯಮಂತ್ರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸ್ಪೀಕರ್ ಕೆ. ಬಿ ಕೋಳಿವಾಡ್

ಜಾರಕಿಹೊಳಿ ಪ್ರಕರಣದಂತೆ ಈ ಪ್ರಕರಣದಿಂದ ಆರೋಪಿಗಳು ಹೊರಬಂದರೆ ಆಶ್ಚರ್ಯ ಪಡಬೇಕಾಗಿಲ್ಲ. ಕೆಲ ಹಿಂದೂ ಸಂಘಟನೆಗಳು ಮತ್ತು ಮುಸ್ಲಿಂ ಸಂಘಟನೆಗಳು ಬಿಜೆಪಿ ಕೃಪಾಪೋಷಿತ ಸಂಘಟನೆಗಳು ಎಂದು ಆರೋಪಿಸಿದರು. ಪಿಎಫ್ಐ ಮತ್ತು ಎಸ್​ಟಿಎಫ್​ಐ ಸಂಘಟನೆಗಳನ್ನ ಬಿಜೆಪಿಯವರೇ ಬೆಳೆಸುತ್ತಿದ್ದಾರೆ ಎಂದು ಕೋಳಿವಾಡ್ ಆರೋಪಿಸಿದರು.

ಇದನ್ನೂ ಓದಿ:ನೋಡಿ: ಸಿದ್ದೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ ತಹಶೀಲ್ದಾರ್​ ನಾಹಿದಾ

For All Latest Updates

TAGGED:

ABOUT THE AUTHOR

...view details