ಕರ್ನಾಟಕ

karnataka

ETV Bharat / state

ತುಂಗಾ ಮೇಲ್ದಂಡೆ ವೀಕ್ಷಣೆಗೆ ಬಂದಿದ್ದ ಅಧಿಕಾರಿಗಳಿಗೆ ರೈತರಿಂದ ತೀವ್ರ ತರಾಟೆ - Latest news for Ranebennur Former

ಜಮೀನಿಂದ ಸಮರ್ಪಕವಾಗಿ ನೀರು ಹೊರಹೋಗಲು ಸರಿಯಾದ ಪೈಪ್‌ಲೈನ್ ವ್ಯವಸ್ಥೆ ಇಲ್ಲದೆ ಹಿನ್ನೆಲೆಯಲ್ಲಿ ಕೋಪಗೊಂಡ ರೈತರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆಯಿತು.

ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ರೈತರು

By

Published : Oct 15, 2019, 3:54 PM IST

ಹಾವೇರಿ: ಜಮೀನಿನಿಂದ ನೀರು ಹೊರಹೋಗಲು ಸರಿಯಾದ ಪೈಪ್‌ಲೈನ್ ವ್ಯವಸ್ಥೆ ಕಲ್ಪಿಸದ ಹಿನ್ನೆಲೆಯಲ್ಲಿ ರೈತರು ಅಧಿಕಾರಿಗಳೆದುರು ಆಕ್ರೋಶ ವ್ಯಕ್ತಪಡಿಸಿದ ಘಟನೆ ರಾಣೆಬೆನ್ನೂರಿನ ಬಳಿ ನಡೆದಿದೆ. ತುಂಗಾ ಮೇಲ್ದಂಡೆ ವೀಕ್ಷಣೆಗೆ ಬಂದಿದ್ದ ಇಬ್ಬರು ಅಧಿಕಾರಿಗಳ ಕಾರು ತಡೆದು ಹೊಲದಲ್ಲಿ ನೀರು ನಿಂತು ಬೆಳೆ ನಾಶವಾಗಿರುವುದನ್ನು ತೋರಿಸಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.


ಇಂಜಿನಿಯರ್​ಗಳಾದ ಚಂದ್ರಶೇಖರ್ ನೆಗಳೂರು ಹಾಗೂ ಆನಂದ ಕುಲಕರ್ಣಿ ತುಂಗಾ ಮೇಲ್ದಂಡೆ ವೀಕ್ಷಿಸಲು ಬಂದಿದ್ದರು. ಹೊಲದಲ್ಲಿ ನೀರು ನಿಂತು ಕೆರೆಯಂತಾಗಿದ್ದ ಜಮೀನಲ್ಲಿ ಹಾನಿಯಾದ ಬೆಳೆ ಕಂಡು ಆಕ್ರೋಶಗೊಂಡಿದ್ದ ರೈತರು ನೀರು ನಿಲ್ಲದಂತೆ ವ್ಯವಸ್ಥೆ ಕಲ್ಪಿಸಿಕೊಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ರು.

ಪೈಪ್‌ಲೈನ್​ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ ನಂತರ ರೈತರು ಸುಮ್ಮನಾಗಿದ್ದಾರೆ. ಶೀಘ್ರವಾಗಿ ಸಮಸ್ಯೆ ಪರಿಹರಿಸದೆ ಹೋದರೆ ರಸ್ತೆಯನ್ನೇ ಕೊರೆದು ನೀರು ಹೊರಬಿಡುವುದಾಗಿ ಎಚ್ಚರಿಸಿದ್ದಾರೆ.

ABOUT THE AUTHOR

...view details