ಹಾವೇರಿ:ಉದಾಸಿ ಕ್ಷೇತ್ರದಲ್ಲಿ ಗೆಲುವಿಗೆ ಹತ್ತಿರ ಬಂದಿದ್ದೇವೆ. ನಮಗೆ ಗೆಲುವಿನ ವಾತಾವರಣ ಇದೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಉದಾಸಿ ಕ್ಷೇತ್ರದಲ್ಲಿ ಗೆಲುವಿಗೆ ಹತ್ತಿರ ಬಂದಿದ್ದೇವೆ.. ಜನರ ಒಲವು ನಮ್ಮ ಕಡೆಗಿದೆ: ಬಿಎಸ್ವೈ - ಉದಾಸಿ ಕ್ಷೇತ್ರ
ಹಾನಗಲ್ ಉಪಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿರುವ ಮಾಜಿ ಸಿಎಂ ಯಡಿಯೂರಪ್ಪ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜನರ ಒಲವು ಬಿಜೆಪಿ ಮೇಲಿದೆ. ಸಿ.ಎಂ ಉದಾಸಿ ಮಾಡಿದ ಕೆಲಸಗಳೇ ನಮಗೆ ಶ್ರೀರಕ್ಷೆ ಎಂದಿದ್ದಾರೆ.
ಬಿಎಸ್ವೈ
ಹಾನಗಲ್ ಕುಮಾರೇಶ್ವರ ಮಠದ ಆವರಣದಲ್ಲಿ ಚೆನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿ ಬಳಿಕ ಮಾತನಾಡಿದ ಅವರು, ಬಹಳ ದೊಡ್ಡ ಅಂತರದಲ್ಲಿ ನಾವು ಗೆಲ್ಲಲಿದ್ದೇವೆ. ಜನರ ಒಲವು ಬಿಜೆಪಿ ಮೇಲಿದೆ. ಸಿ.ಎಂ ಉದಾಸಿ ಮಾಡಿದ ಕೆಲಸಗಳೇ ನಮಗೆ ಶ್ರೀರಕ್ಷೆ. ಜನರೇ ನಿರ್ಧಾರ ಮಾಡಿದ್ದಾರೆ. ನಮ್ಮನ್ನೂ ದೊಡ್ಡ ಅಂತರದಿಂದ ಗೆಲ್ಲಿಸಲಿದ್ದಾರೆ ಎಂದರು.