ಹಾವೇರಿ:ಗದಗದಿಂದ ಜಿಲ್ಲೆಗೆ ಪ್ರವೇಶಿಸಲು ಶಾಸಕರ ಹೆಸರಿನಲ್ಲಿ ನಕಲಿ ಪಾಸ್ ಸೃಷ್ಟಿಸಿದ್ದ ಅಸಾಮಿಯೊಬ್ಬ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಬ್ಯಾಡಗಿ ಶಾಸಕರ ಹೆಸರಿನಲ್ಲಿ ನಕಲಿ ಪಾಸ್ ಸೃಷ್ಟಿಸಿ ಓಡಾಟ: ಆರೋಪಿಯ ಬಂಧನ - ಗದಗ ದಿಂದ ಜಿಲ್ಲೆಗೆ ಪ್ರವೇಶಿಸಲು ಶಾಸಕರ ಹೆಸರಿನಲ್ಲಿ
ಗದಗದಿಂದ ಜಿಲ್ಲೆಗೆ ಪ್ರವೇಶಿಸಲು ಶಾಸಕರ ಹೆಸರಿನಲ್ಲಿ ನಕಲಿ ಪಾಸ್ ಸೃಷ್ಟಿಸಿದ್ದ ಅಸಾಮಿಯೊಬ್ಬ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ದಿಲೀಪ್ ಬಂಕಾಪುರ್ ಎಂಬಾತ ಬ್ಯಾಡಗಿ ಶಾಸಕರ ಹೆಸರಿನಲ್ಲಿ ಲಕ್ಷ್ಮೇಶ್ವರದಿಂದ ರಾಣೆಬೆನ್ನೂರಿಗೆ ಕಾರಿನಲ್ಲಿ ಪಯಣಿಸುತ್ತಿದ್ದ. ಕೊರೊನಾ ಹಿನ್ನೆಲೆಯಲ್ಲಿ ವೈದ್ಯಕೀಯ ಕಾರಣಕ್ಕಾಗಿ ಪಾಸ್ ನೀಡಿದವರಿಗೆ ಮಾತ್ರ ಅಂತರ್ ಜಿಲ್ಲಾ ಪಾಸ್ ನೀಡಲಾಗುತ್ತಿದೆ. ಆದರೆ ಆರೋಪಿ ಶಾಸಕ ಎಂದು ಕಾರ್‌ಗೆ ಅಂಟಿಸಿಕೊಂಡು ಸಂಚರಿಸುತ್ತಿದ್ದ ಎನ್ನಲಾಗಿದೆ.
ಚೆಕ್ ಪೋಸ್ಟ್‌ನಲ್ಲಿದ್ದ ಹಾವೇರಿ ಎಡಿಸಿ ಯೋಗೇಶ್ವರ ಸಂಶಯಗೊಂಡು ವಿಚಾರಿಸಿದಾಗ ಸತ್ಯ ಹೊರ ಬಂದಿದೆ. ಯೋಗೇಶ್ವರ ಈ ಕುರಿತಂತೆ ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿಗೆ ಫೋನ್ ಮಾಡಿ ಖಚಿತಪಡಿಸಿಕೊಂಡಿದ್ದಾರೆ. ಆರೋಪಿ ಬಳಸಿದ ಕಾರ್ ವಶಕ್ಕೆ ಪಡೆದು ಆತನ ಮೇಲೆ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
TAGGED:
ನಕಲಿಪಾಸ್ ಸೃಷ್ಟಿಸಿದ್ದ ಅಸಾಮಿ