ಹಾವೇರಿ:ಮನೆಯಲ್ಲಿದ್ದ ಸಿಲಿಂಡರ್ ಆಕಸ್ಮಿಕ ಸ್ಫೋಟಗೊಂಡು ಐವರಿಗೆ ಗಾಯಗಳಾಗಿರುವ ಘಟನೆ ಹಿರೇಕೆರೂರು ತಾಲೂಕಿನ ಕಚವಿ ಗ್ರಾಮದಲ್ಲಿ ನಡೆದಿದೆ. ಕಚವಿ ಗ್ರಾಮದ ಚಿದಂಬರರಾವ್ ನಾಡಿಗೇರ ಎಂಬುವರ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. ಘಟನೆ ವೇಳೆ ಮನೆಯಲ್ಲಿದ್ದ ಚಿದಂಬರರಾವ್, ಸೀತಾರಾಮ, ಪುಷ್ಪಾ ಹಾಗೂ ಓರ್ವ ಬಾಲಕ ಮತ್ತು ಓರ್ವ ಬಾಲಕಿ ಗಾಯಗೊಂಡಿದ್ದಾರೆ. ಐವರಿಗೆ ಮೈ, ಕೈ, ಕಾಲು ಸೇರಿದಂತೆ ದೇಹದ ವಿವಿಧೆಡೆ ಸುಟ್ಟ ಗಾಯಗಳಾಗಿವೆ.
ಹಾವೇರಿ: ಮನೆಯಲ್ಲಿ ಸಿಲಿಂಡರ್ ಸ್ಫೋಟ - ಐವರಿಗೆ ಗಾಯ! - ಹಾವೇರಿ ಅಪರಾಧ ಸುದ್ದಿ
ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡು ಐವರು ಗಾಯಗೊಂಡ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.
ಹಾವೇರಿಯಲ್ಲಿ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಐವರಿಗೆ ಗಾಯ
ಓದಿ:ಮಹಿಳೆಗೆ ಲೈಂಗಿಕ ಕಿರುಕುಳ.. ಗಂಡನ ಆವಾಜ್‌ಗೆ ಹೆದರಿ ಯುವಕ ಆತ್ಮಹತ್ಯೆ!
ಗಾಯಾಳುಗಳನ್ನ ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯಲ್ಲಿ ಮನೆಯಲ್ಲಿದ್ದ ವಸ್ತುಗಳಿಗೂ ಸಹ ಹಾನಿಯಾಗಿದ್ದು, ಸಿಲಿಂಡರ್ ಅನಿಲ ಸೋರಿಕೆಯಿಂದ ದುರ್ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಂಸಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.