ಹಾವೇರಿ: ಜಿಲ್ಲೆಯ ಶಿಗ್ಗಾವಿ ಪಟ್ಟಣದ ಎಪಿಎಂಸಿ ಮಾರುಕಟ್ಟೆ ಬಳಿ ಬುಧವಾರ ಸಂಜೆ ಚಿನ್ನಿದಾಂಡು ಆಡುತ್ತಿದ್ದ ಐವರು ಹಾಗೂ ವಾಹನ ಮಾಲೀಕನ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ ಕಂಡಿದೆ. ಉಮೇಶ್ ಶಿವಜೋಗಿ ಮಠ (40) ಮೃತ ವ್ಯಕ್ತಿ.
ಬುಧವಾರ ಸಂಜೆ ಎಪಿಎಂಸಿ ಬಳಿಯ ವೇ ಬ್ರಿಡ್ಜ್ ಹತ್ತಿರ ಕೆಲವು ಹುಡುಗರು ಚಿನ್ನಿದಾಂಡು ಆಡುತ್ತಿದ್ದರು. ಈ ವೇಳೆ ಚಿನ್ನಿ, ಉಮೇಶನ ಟಿಪ್ಪರ್ಗೆ ಬಂದು ಬಡಿದಿದ್ದು, ಜಗಳ ಶುರುವಾಗಿದೆ. ಕೋಪಗೊಂಡು ಐದಾರು ಜನ ಉಮೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಪರಿಣಾಮ ಉಮೇಶ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಆತನನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿಯೇ ಮೃತಪಟ್ಟಿದ್ದಾನೆ.