ಕರ್ನಾಟಕ

karnataka

ETV Bharat / state

ಹಾವೇರಿ ಕೊರೊನಾ ಪ್ರಕರಣ: ಸೋಂಕಿತ ಮುಂಬೈನಿಂದ ಬಂದಿದ್ದು ಹೇಗೆ? - ಹಾವೇರಿ ಮೊದಲ ಕೊರೊನಾ ಪ್ರಕರಣ

ಹಾವೇರಿಯಲ್ಲಿ ಮೊದಲ ಕೊರೊನಾ ಪ್ರಕರಣ ದೃಢಪಟ್ಟಿದ್ದು, ಈ ಸೋಂಕಿತ ವ್ಯಕ್ತಿ ಮುಂಬೈನಿಂದ ಬಂದಿದ್ದ ಎಂದು ತಿಳಿದು ಬಂದಿದೆ.

ಹಾವೇರಿ ಜಿಲ್ಲಾಸ್ಪತ್ರೆ
Haveri district hospital

By

Published : May 4, 2020, 3:09 PM IST

ಹಾವೇರಿ: ಹಾವೇರಿ ಜಿಲ್ಲೆಯಲ್ಲಿ ಪ್ರಥಮವಾಗಿ ಕಾಣಿಸಿಕೊಂಡ ಕೊರೊನಾ ವೈರಸ್ ಸೋಂಕಿತ ಪಿ 639 ಇದೇ 28 ರಂದು ಮುಂಬೈಯಿಂದ ಸವಣೂರಿಗೆ ಬಂದಿದ್ದ ಎನ್ನಲಾಗಿದೆ.

ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ

ಮುಂಬೈಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಪಿ 639 ಮುಂಬೈಯಿಂದ ಪುಣೆಗೆ ಬಂದು, ಅಲ್ಲಿಂದ ಹುಬ್ಬಳ್ಳಿಗೆ ನಂತರ ಸವಣೂರಿಗೆ ಬಂದಿದ್ದ ಎನ್ನಲಾಗಿದೆ. ಅಲ್ಲದೇ ಈತನ ಜೊತೆ ಅವನ ಅಣ್ಣ (42) ಮತ್ತು ಅಣ್ಣನ ಮಗ (19) ಸಹ ಪ್ರಯಾಣಿಸಿದ್ದರು ಎನ್ನಲಾಗಿದೆ.

ಸೋಂಕಿತ ವ್ಯಕ್ತಿ ಸವಣೂರಿಗೆ ಏ.28ಕ್ಕೆ ಬಂದಿದ್ದ ಬೆನ್ನಲ್ಲಿ ಸ್ಥಳೀಯರು 29 ರಂದು ಆಸ್ಪತ್ರೆಗೆ ಕರೆತಂದಿದ್ದರು. 29 ರಂದು ಸೋಂಕಿತನ ಗಂಟಲು ದ್ರವ ಪರೀಕ್ಷೆಗೆ ಕಳಿಸಲಾಗಿತ್ತು. ಆತನ ವರದಿ ಇದೇ 3ರಂದು ಬಂದಿದೆ.

ಸೋಂಕಿತನ ಮನೆಯಲ್ಲಿ ಒಟ್ಟು 11 ಜನರಿದ್ದು, ಅವರೆಲ್ಲರನ್ನು ಆಸ್ಪತ್ರೆಗೆ ಕರೆತಂದು ತಪಾಸಣೆ ನಡೆಸಿದ ಆರೋಗ್ಯ ಸಿಬ್ಬಂದಿ ಸೇರಿದಂತೆ 21 ಜನರನ್ನ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಈಗಾಗಲೇ 21 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಿಕೊಂಡಲಾಗಿದೆ.

ABOUT THE AUTHOR

...view details