ರಾಣೆಬೆನ್ನೂರು:ನಗರದ ದುರ್ಗಾದೇವಿ ತರಕಾರಿ ಮಾರುಕಟ್ಟೆಯಲ್ಲಿ ತಡರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಸೋಮವಾರ ತಡರಾತ್ರಿ ಮಾರುಕಟ್ಟೆಯ ಒಂದನೇ ಪ್ರಾಂಗಣದಲ್ಲಿ ಇರುವ 7 ಹಣ್ಣಿನ ಅಂಗಡಿ ಹಾಗೂ 10 ತರಕಾರಿ ಅಂಗಡಿಗಳು ಬೆಂಕಿಯಿಂದ ಬಹುತೇಕ ಸುಟ್ಟು ಹೋಗಿವೆ.
ದಿನ ನಿತ್ಯ ತರಕಾರಿ ಹಾಗೂ ಹಣ್ಣುಗಳನ್ನು ಮಾರಿಕೊಂಡು ಜೀವನ ಸಾಗಿಸುತ್ತಿದ್ದ ವ್ಯಾಪಾರಸ್ಥರು ಭಾರಿ ನಷ್ಟಕ್ಕೊಳಗಾಗಿದ್ದಾರೆ. ಅಂಗಡಿಗಳು ಸುಟ್ಟು ಹೋಗಿರುವುದನ್ನು ಕಂಡು ವ್ಯಾಪಾರಿಗಳು ಕಣ್ಣೀರು ಹಾಕುತ್ತಿರುವ ದೃಶ್ಯ ಕಂಡು ಬಂತು.