ಕರ್ನಾಟಕ

karnataka

ಬಿಜೆಪಿ ಅಭ್ಯರ್ಥಿ ಅರುಣ್​ಕುಮಾರ್ ಪೂಜಾರ್ ವಿರುದ್ಧ ಎಫ್ಐಆರ್

By

Published : Apr 30, 2023, 1:01 PM IST

ಅನುಮತಿ ಪಡೆಯದೆ ಕಾಲೇಜಿನಲ್ಲಿ ಮತಯಾಚನೆ-ಬಿಜೆಪಿ ಅಭ್ಯರ್ಥಿ ಅರುಣ್​ಕುಮಾರ್ ಪೂಜಾರ್ ವಿರುದ್ಧ ಎಫ್ಐಆರ್.

BJP candidate Arun Kumar Pujar
ಬಿಜೆಪಿ ಅಭ್ಯರ್ಥಿ ಅರುಣ್​ಕುಮಾರ್ ಪೂಜಾರ್

ಹಾವೇರಿ:ಜಿಲ್ಲೆಯ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ್​​ಕುಮಾರ್ ಪೂಜಾರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅನುಮತಿ ಪಡೆಯದೆ ಕೆ.ವಿ ಪಾಲಿಟೆಕ್ನಿಕ್​​ ಕಾಲೇಜಿನಲ್ಲಿ ಮತಯಾಚನೆ ಮಾಡಿದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ. ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಗಂಗಾಜಲ ತಾಂಡಾ ಬಳಿ ಇರುವ ಕಾಲೇಜಿನಲ್ಲಿ ಅರುಣ್​ಕುಮಾರ್ ಮತಯಾಚಿಸಿದ್ದರು. ಮತಯಾಚನೆ ಮಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲಾಣಗಳಲ್ಲಿ ಪೋಸ್ಟ್​​ ಮಾಡಿದ್ದರು. ಈ ಸಂಬಂಧ ರಾಣೆಬೆನ್ನೂರು ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಕೇಸ್​ ದಾಖಲಾಗಿದೆ.

ಬೆಂಬಲಿಗರಿಗೆ ತೀವ್ರ ತರಾಟೆ:ಮತ್ತೊಂದೆಡೆ ಅರುಣ್​ಕುಮಾರ್ ಪರ ಮತ ಕೇಳಲು ಬಂದ ಬೆಂಬಲಿಗರಿಗೆ ಗ್ರಾಮಸ್ಥರು ಬೈದು ಕಳುಹಿಸಿದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಖಂಡೇರಾಯನಹಳ್ಳಿಯಲ್ಲಿ ನಡೆದಿದೆ. ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಖಂಡೇರಾಯನಹಳ್ಳಿ ತಾಂಡಾ ನಿವಾಸಿಗಳು ಅರುಣ್​ಕುಮಾರ್​ ಅವರ ಬೆಂಬಲಿಗರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಎಫ್ಐಆರ್ ಪ್ರತಿ

"ಈ ಹಿಂದೆ ತಾಂಡಾದ ಸಮಸ್ಯೆಗೆ ಅರುಣ್​ಕುಮಾರ್ ಸರಿಯಾಗಿ ಸ್ಪಂದಿಸಿಲ್ಲ. ನಾವು ಅವರ ಮನೆಗೆ ಹೋಗಿದ್ದಾಗ ಬೈದು ಕಳುಹಿಸಿದ್ದರು. ಅಲ್ಲದೇ ನಿಮ್ಮ ಮತ ಬೇಡ ಎಂದಿದ್ದರು. ಈಗ ಯಾಕೆ? ನಿಮ್ಮನ್ನ ಕಳುಹಿಸಿದ್ದಾರೆ. ತಾಂಡಾದಿಂದ ಹೊರನಡೆಯಿರಿ" ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಖಂಡೇರಾಯನಹಳ್ಳಿ ತಾಂಡಾದಲ್ಲಿ ಸುಮಾರು 500ಕ್ಕೂ ಹೆಚ್ಚು ಮತದಾರರಿದ್ದಾರೆ.

ಸೋಮಣ್ಣ ವಿರುದ್ಧ ಆಕ್ರೋಶ:ಸಂವಿಧಾನ ಬದಲಿಸಬೇಕೆಂದವರಿಗೆ ನಮ್ಮೂರಿಗೆ ಪ್ರವೇಶ ಇಲ್ಲ. ಆದ್ದರಿಂದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ನಮ್ಮೂರಿಗೆ ಬರಬಾರದು ಎಂದು ಗ್ರಾಮಸ್ಥರು ಪಟ್ಟು ಹಿಡಿದ ಘಟನೆ ಏ.28ರಂದು ರಾತ್ರಿ ನಂಜನಗೂಡು ತಾಲೂಕಿನ ಬಿಳುಗಲಿ ಗ್ರಾಮದಲ್ಲಿ ನಡೆದಿತ್ತು. ಶುಕ್ರವಾರ(ಏ.28) ರಾತ್ರಿ ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿ.ಸೋಮಣ್ಣ ಪ್ರಚಾರ ಕೈಗೊಂಡಿದ್ದರು. ಆದರೆ ಗ್ರಾಮಕ್ಕೆ ಬರುವುದಕ್ಕಿಂತ ಮೊದಲು ಸೋಮಣ್ಣ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಬಿಳುಗಲಿ ಗ್ರಾಮದ ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಜಮಾಯಿಸಿದ್ದ ಯುವಕರು, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ. ಆರ್ ಅಂಬೇಡ್ಕರ್ ಅವರ ಪರವಾಗಿ ಜಯ ಘೋಷ ಕೂಗಿದ್ದರು. ಸಂವಿಧಾನ ಚೇಂಜ್ ಮಾಡ್ತೀವಿ ಎಂದರೆ ಸುಮ್ಮನಿರಲ್ಲ. ಸಂವಿಧಾನ ಬರೆದುಕೊಟ್ಟ ಅಂಬೇಡ್ಕರ್ ವಿರೋಧಿಗಳಿಗೆ ನಮ್ಮೂರಿಗೆ ಬರಲು ನೈತಿಕತೆ ಇಲ್ಲ ಎಂದು ಕಿಡಿಕಾರಿದ್ದರು.

ಇದನ್ನೂ ಓದಿ:ಸಂವಿಧಾನ ಬದಲಿಸಬೇಕೆಂದವರು ನಮ್ಮೂರಿಗೆ ಬರಬಾರದು ಎಂದು ಪಟ್ಟು ಹಿಡಿದ ಗ್ರಾಮಸ್ಥರು!

ಮೂವರ ವಿರುದ್ಧ ಎಫ್‌ಐಆರ್‌: ಚಾಮರಾಜನಗರ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ, ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ ಅವರಿಗೆ ನಾಮಪತ್ರ ವಾಪಸ್ ಪಡೆಯುವಂತೆ ಆಮಿಷ ಒಡ್ಡಿದ್ದರು ಎನ್ನಲಾದ ಆಡಿಯೋ ವೈರಲ್ ಆದ ಹಿನ್ನೆಲೆ ಮೂವರು ಅಪರಿಚಿತರ ವಿರುದ್ಧ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೋಮಣ್ಣ, ನಟರಾಜು, ಸುದೀಪ್ ಎಂದು ಆಡಿಯೋದಲ್ಲಿ ಉಲ್ಲೇಖಗೊಂಡ ಮೂವರು ಹೆಸರುಗಳ ಮೇಲೆ ಅಪರಿಚಿತರು ಎಂದು ನಮೂದಿಸಿ ಚಾಮರಾಜನಗರ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಯೋಗಾನಂದ ಮೌಖಿಕ ಆದೇಶದ ಮೇರೆಗೆ ಜಯಣ್ಣ ಎಂಬವರು ದೂರು ಕೊಟ್ಟಿದ್ದರು.

ಇದನ್ನೂ ಓದಿ:ವೈರಲ್​ ಆಗಿರುವ ಆಡಿಯೋಗೂ ನನಗೂ ಸಂಬಂಧ ಇಲ್ಲ: ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ

ABOUT THE AUTHOR

...view details