ಕರ್ನಾಟಕ

karnataka

ETV Bharat / state

ಗುಮ್ಮನಂತೆ ಕಾಡಿ ಸುಮ್ಮನಾದ ವರುಣ... ನಿಟ್ಟುಸಿರು ಬಿಟ್ಟ ಹಾವೇರಿ ಮಂದಿ - Rain in haveri district

ರಾಜ್ಯದಲ್ಲಿ ಮತ್ತೆ ಪ್ರವಾಹದ ಪರಿಸ್ಥಿತಿ ಎದುರಾಗಿದ್ದು, ಕಳೆದ ಒಂದು ವಾರದದಲ್ಲಿ ಸುರಿದ ಭೀಕರ ಮಳೆಗೆ ಹಾವೇರಿ ಜಿಲ್ಲಯೂ ತತ್ತರಿಸಿ ಹೋಗಿತ್ತು. ಒಂದು ವಾರದ ನಂತರ ವರುಣರಾಯ ಕೊಂಚ ಕೃಪೆ ತೋರಿದ್ದು, ಜಿಲ್ಲೆಯ ಜನತೆ ಸ್ವಲ್ಪ ಮಟ್ಟಿಗೆ ನಿರಾಳರಾಗಿದ್ದಾರೆ.

ಹಾವೇರಿಯಲ್ಲಿ ಕ್ಷೀಣಿಸಿದ ಮಳೆ

By

Published : Oct 24, 2019, 8:25 AM IST

ಹಾವೇರಿ: ಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಂತ ಭೀಕರ ಮಳೆಯಾಗಿದ್ದು, ಜನ ಜೀವನ ಅಸ್ಥವ್ಯಸ್ಥಗೊಂಡಿತ್ತು, ಹೀಗೆ ಮುಂದುವರೆದರೆ ಉಳಿಗಾಲವಿಲ್ಲ ಎನ್ನುವಷ್ಟರಲ್ಲಿ ವರುಣರಾಯ ತನ್ನ ಆರ್ಭಟವನ್ನು ಕಡಿಮೆ ಮಾಡಿದ್ದುಮ ಜಿಲ್ಲೆಯ ಜನೆತೆಗೆ ನಿಟ್ಟುಸಿರು ಬಿಡುವಂತೆ ಮಾಡಿದ್ದಾನೆ.

ಜಿಲ್ಲೆಯಲ್ಲಿ ಶನಿವಾರ ಸರಾಸಿರ 160 ಮಿ.ಮೀಟರ್, ಭಾನುವಾರ 360 ಮಿ.ಮೀಟರ್, ಸೋಮವಾರ 435 ಮಿ.ಮೀಟರ್ ಮತ್ತು ಮಂಗಳವಾರ 107 ಮಿ.ಮೀಟರ್ ಮಳೆಯಾಗಿದ್ದು, ಬುಧವಾರ ಮಳೆ ಕ್ಷೀಣಿಸಿದ ಪರಿಣಾಮ ಜಿಲ್ಲೆಯಾದ್ಯಂತೆ ಸರಾಸರಿ 50 ಮಿ.ಮೀಟರ್ ಮಳೆಯಾಗಿದೆ.

ಹಾವೇರಿಯಲ್ಲಿ ಕ್ಷೀಣಿಸಿದ ಮಳೆ

ಸೋಮವಾರ ಹಿರೇಕೆರೂರು ಸುಣ್ಣದ ಕಾಲುವೆಯಲ್ಲಿ ತೇಲಿಹೋಗಿದ್ದ 14 ವರ್ಷದ ಬಾಲಕ ಶೋಯೆಬ್ ಮೃತದೇಹ ಬುಧವಾರ ಪತ್ತೆಯಾಗಿದೆ. ಇನ್ನು ರಾಣೆಬೆನ್ನೂರು ತಾಲೂಕಿನ ಚಿಕ್ಕಹರಳಹಳ್ಳಿ ಮತ್ತು ಚಿಕ್ಕ ಕುರುವತ್ತಿ ನಡುವಿನ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ 30 ವರ್ಷದ ಮಂಜುನಾಥ್​​​ ಎಂಬಾತನನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಈ ಮಧ್ಯೆ ಜಿಲ್ಲೆಯ ಅತಿವೃಷ್ಠಿ ಅವಗಡ ತಡೆಯಲು ಕೇಂದ್ರದಿಂದ ಎನ್‌ಡಿಆರ್‌ಎಫ್ ತಂಡ ಆಗಮಿಸಿದ್ದು, ಸದ್ಯ ಪ್ರವಾಸಿಮಂದಿರದಲ್ಲಿ ತಂಡ ಬೀಡುಬಿಟ್ಟಿದ್ದು ಜಿಲ್ಲೆಯ ಅತಿವೃಷ್ಠಿಯಲ್ಲಿನ ಅವಗಡಗಳ ನಿರ್ವಹಣೆ ಮಾಡಲಿದೆ.

ABOUT THE AUTHOR

...view details