ಕರ್ನಾಟಕ

karnataka

ETV Bharat / state

ಹಾವೇರಿ ಜಿಲ್ಲೆಯಲ್ಲಿ 15 ಪಾಸಿಟಿವ್‌ ಪತ್ತೆ.. ಓರ್ವ ಸೋಂಕಿತ ಪರಾರಿ - ಕೊರೊನಾ ವೈರಸ್​

ಕೊರೊನಾ ಕಾವು ರಾಜ್ಯದಲ್ಲಿ ಹೆಚ್ಚಾಗುತ್ತಲೇ ಇದ್ದು, ಇಂದು ಹಾವೇರಿ ಜಿಲ್ಲೆಯಲ್ಲಿ 15 ಜನರಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ. ಸೋಂಕಿತರ ಪೈಕಿ ಓರ್ವ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ..

fifteen-corona-cases-found-in-haveri
ಹಾವೇರಿ ಜಿಲ್ಲೆಯಲ್ಲಿ 15 ಸೋಂಕಿತರು ಪತ್ತೆ

By

Published : Jul 5, 2020, 9:57 PM IST

ಹಾವೇರಿ : ಜಿಲ್ಲೆಯಲ್ಲಿ ಇಂದು 15 ಜನರಿಗೆ ಕೊರೊನಾ ಸೋಂಕು ತಗುಲಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 166ಕ್ಕೆ ಏರಿಕೆಯಾಗಿದೆ.

ಜಿಲ್ಲೆಯ ಹಾನಗಲ್​​ನಲ್ಲಿ ಮೂವರು ಆಶಾ ಕಾರ್ಯಕರ್ತೆಯರು ಸೇರಿ ಐವರಿಗೆ ಸೋಂಕು ತಲುಲಿದೆ. ಹಾವೇರಿ ತಾಲೂಕಿನಲ್ಲಿ ಓರ್ವ ಬಾಣಂತಿ, ಓರ್ವ ಎಎಸ್ಐ, ಶಿಕ್ಷಕ, ವೈದ್ಯ ಸೇರಿ ಐವರಿಗೆ ಸೋಂಕು ತಗುಲಿರುವುದು ಖಚಿತವಾಗಿದೆ.

ಹಾವೇರಿ ಜಿಲ್ಲೆಯಲ್ಲಿ 15 ಸೋಂಕಿತರು ಪತ್ತೆ

ಶಿಗ್ಗಾಂವಿ ಪಟ್ಟಣದ ಕಂಟೇನ್ಮೆಂಟ್ ಝೋನ್‌ನ ರೋಗಿ- 9412ರ ಸಂಪರ್ಕದಿಂದ ಮೂವರಿಗೆ ಸೋಂಕು ತಗುಲಿದೆ. ರಟ್ಟೀಹಳ್ಳಿ ತಾಲೂಕಿನಲ್ಲಿ ಇಬ್ಬರಿಗೆ, 15 ಪ್ರಕರಣಗಳಲ್ಲಿ 14 ಜನ ನಿಗದಿತ ಆಸ್ಪತ್ರೆಗೆ ದಾಖಲಾಗಿದ್ದಾರೆ. ಓರ್ವ ಮನೆಯಿಂದ ಪರಾರಿಯಾಗಿದ್ದು, ರಟ್ಟೀಹಳ್ಳಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ABOUT THE AUTHOR

...view details