ಹಾವೇರಿ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ನೆಗಡಿ, ಕೆಮ್ಮು ಮತ್ತು ಜ್ವರದಿಂದ ಬಳಲುತ್ತಿದ್ದ ಕೆಎಸ್ಆರ್ಪಿ ಪಡೆಯ ಪೇದೆಯನ್ನ ಹಾವೇರಿ ಜಿಲ್ಲಾಸ್ಪತ್ರೆಯ ಐಸೋಲೇಶನ್ ವಾರ್ಡ್ಗೆ ದಾಖಲಿಸಲಾಗಿದೆ.
ಕಳೆದ ತಿಂಗಳು ಕರ್ತವ್ಯದ ಮೇಲೆ ಸುರತ್ಕಲ್‌ಗೆ ತೆರಳಿದ್ದ ಪೇದೆ, ಏಪ್ರಿಲ್ 1, 2020ರಂದು ಹಾವೇರಿಯ ಕೇಂದ್ರ ಸ್ಥಾನಕ್ಕೆ ಮರಳಿದ್ದರು. ನಿನ್ನೆ ರಾತ್ರಿ ಹಾವೇರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಕರ್ತವ್ಯದ ಮೇಲಿದ್ದ ಪೇದೆಯನ್ನ ಜಿಲ್ಲಾಸ್ಪತ್ರೆಯ ಐಸೋಲೇಶನ್ ವಾರ್ಡ್ಗೆ ದಾಖಲು ಮಾಡಲಾಗಿದೆ.