ಹಾವೇರಿ: ಹೊರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವ ಜನರನ್ನು ಗ್ರಾಮದ ಜನರೇ ಸ್ಥಳೀಯ ಆಸ್ಪತ್ರೆಗೆ ಕಳುಹಿಸುತ್ತಿರುವ ಘಟನೆ ನಡೆದಿದೆ.
ಹಾವೇರಿಯಲ್ಲಿ ಕೊರೊನಾ ಭಯ: ಹೊರರಾಜ್ಯದಿಂದ ಬಂದವರಿಗೆ ಜಿಲ್ಲಾಸ್ಪತ್ರೆಯಲ್ಲಿ ತಪಾಸಣೆ - haveri issue
ಕೊರೊನಾ ಹರಡುವ ಭಯದಿಂದ ಹಾವೇರಿ ಜಿಲ್ಲೆಗೆ ಹೊರರಾಜ್ಯಗಳಿಂದ ಬರುವ ಜನರನ್ನು ಸ್ಥಳೀಯರ ಒತ್ತಾಯದ ಮೇರೆಗೆ ತಪಾಸಣೆ ನಡೆಸಲಾಗುತ್ತಿದೆ.
ಹಾವೇರಿಯಲ್ಲಿ ಕೊರೊನಾ ಭಯ
ಜಿಲ್ಲೆಯ ವಿವಿಧ ಗ್ರಾಮಗಳಿಗೆ ಬೇರೆ ಭಾಗಗಳಿಂದ ಬಂದಿರುವ ಜನರಿಗೆ ಗ್ರಾಮದ ಜನರ ಒತ್ತಾಯದ ಮೇರೆಗೆ ಜಿಲ್ಲಾಸ್ಪತ್ರೆಯಲ್ಲಿ ತಪಾಸಣೆ ನಡೆಸಲಾಗುತ್ತಿದೆ.
ಗೋವಾ, ಕೇರಳ ಸೇರಿದಂತೆ ವಿವಿಧ ರಾಜ್ಯಗಳಿಗೆ ದುಡಿಯಲು ಹೋಗಿದ್ದ ಜನರನ್ನ ಆ್ಯಂಬ್ಯುಲೆನ್ಸ್ ವಾಹನಗಳ ಮೂಲಕ ಜಿಲ್ಲಾಸ್ಪತ್ರೆಗೆ ಕರೆತಂದು ತಪಾಸಣೆ ನಡೆಸಲಾಗುತ್ತಿದೆ. ತಪಾಸಣೆಗೆ ಒಳಗಾದ ಯಾರಲ್ಲೂ ಆರೋಗ್ಯ ಸಮಸ್ಯೆ ಕಂಡುಬಂದಿಲ್ಲ. ಆದರೂ ಸಹ ಮನೆಯಲ್ಲಿಯೇ ಇರುವಂತೆ ವೈದ್ಯರು ಸೂಚಿಸಿದ್ದಾರೆ.