ಕರ್ನಾಟಕ

karnataka

ETV Bharat / state

ರಾಣೆಬೆನ್ನೂರಲ್ಲಿ ತಂದೆಯಿಂದಲೇ ಮಗಳ ಮೇಲೆ ನಿರಂತರ ಅತ್ಯಾಚಾರ! - ರಾಣೆಬೆನ್ನೂರು ಅಪರಾಧ,

ಹೆತ್ತ ಮಗಳ ಮೇಲೆ ತಂದೆಯೊಬ್ಬ ಅತ್ಯಾಚಾರ ಎಸಗಿರುವ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನಲ್ಲಿ ನಡೆದಿದೆ.

Father rapes daughter, Father rapes daughter repeatedly, Father rapes daughter repeatedly in Ranebennur, Ranebennur crime, Ranebennur crime news, ತಂದೆಯಿಂದ ಮಗಳ ಅತ್ಯಾಚಾರ, ತಂದೆಯಿಂದ ಮಗಳ ನಿರಂತರ ಅತ್ಯಾಚಾರ, ರಾಣೆಬೆನ್ನೂರಿನಲ್ಲಿ ತಂದೆಯಿಂದ ಮಗಳ ನಿರಂತರ ಅತ್ಯಾಚಾರ, ರಾಣೆಬೆನ್ನೂರು ಅಪರಾಧ, ರಾಣೆಬೆನ್ನೂರು ಅಪರಾಧ ಸುದ್ದಿ,
ಸಾಂದರ್ಭಿಕ ಚಿತ್ರ

By

Published : Dec 19, 2020, 8:05 PM IST

Updated : Dec 19, 2020, 8:36 PM IST

ರಾಣೆಬೆನ್ನೂರು: ಮಗಳ ‌ಮೇಲೆ ಹೆತ್ತ ತಂದೆಯೇ ನಿರಂತರ ಅತ್ಯಾಚಾರ ಎಸಗಿರುವ ಘಟನೆ ರಾಣೆಬೆನ್ನೂರಲ್ಲಿ ನಡೆದಿದ್ದು, ನಾಲ್ಕು ತಿಂಗಳ ಬಳಿಕ ಬೆಳಕಿಗೆ ಬಂದಿದೆ.

ರಾಣೆಬೆನ್ನೂರಲ್ಲಿ ಕಳೆದ ನಾಲ್ಕು ತಿಂಗಳ ಹಿಂದೆ ವ್ಯಕ್ತಿಯೊಬ್ಬ ತನ್ನ ಸ್ವಂತ ಮಗಳ ಮೇಲೆಯೇ ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಗ್ರಾಮವೊಂದರ ನಿವಾಸಿಯಾಗಿರುವ ಆರೋಪಿ,​ ತನ್ನ ಪತ್ನಿ ಮತ್ತು ಮಗಳ ಜತೆ ರಾಣೆಬೆನ್ನೂರು ನಗರಕ್ಕೆ ಕೆಲಸಕ್ಕೆ ಬಂದಿದ್ದ. ಅ. 15, 2020ರಂದು ಆರೋಪಿ ಮತ್ತು ಆತನ ಪತ್ನಿ, ಮಗಳು ಸೇರಿ ಕೂಲಿ‌ ಕೆಲಸಕ್ಕೆ ಹೋಗಿದ್ದರು. ಮಧ್ಯಾಹ್ನ ಮನೆಗೆ ಊಟಕ್ಕೆ ಬಂದ ವೇಳೆ ತಂದೆ ತನ್ನ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ. ಯಾರಿಗಾದರೂ ಈ ವಿಷಯ ತಿಳಿಸಿದರೆ ಕೊಲೆ ಮಾಡುವುದಾಗಿ ಮಗಳಿಗೆ ಬೆದರಿಕೆ ಹಾಕಿ ಸತತ ನಾಲ್ಕು ದಿನ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದು ಬಂದಿದೆ.

ಕೆಲ ದಿನಗಳ ನಂತರ ಕುಟುಂಬ ಸಮೇತವಾಗಿ ಮಂಗಳೂರಿಗೆ ತೆರಳಿದಾಗ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಬಾಲಕಿ ಸಂಬಂಧಿಕರು ಮತ್ತು ಪೋಷಕರು ಮಂಗಳೂರು ಮಹಿಳಾ ಠಾಣೆಯಲ್ಲಿ ಪ್ರಕರಣ ‌ದಾಖಲಿಸಿದ್ದರು. ಬಾಲಕಿಯ ‌ಮೇಲೆ ಅತ್ಯಾಚಾರ ನಡೆದ ಘಟನೆ ರಾಣೆಬೆನ್ನೂರು ಆದ ಹಿನ್ನೆಲೆ ಇಲ್ಲಿನ ಶಹರ ಠಾಣೆಗೆ ಪ್ರಕರಣವನ್ನು ವರ್ಗಾವಣೆ ಮಾಡಲಾಗಿದೆ.

Last Updated : Dec 19, 2020, 8:36 PM IST

ABOUT THE AUTHOR

...view details