ಕರ್ನಾಟಕ

karnataka

ETV Bharat / state

ಮೆಕ್ಕೆಜೋಳದ ಹಣ ನೀಡದೆ ವಂಚನೆ: ವ್ಯಾಪಾರಿ ಮನೆಗೆ ನುಗ್ಗಿ ರೈತರ ಪ್ರತಿಭಟನೆ

ರೈತರ ಮೆಕ್ಕೆಜೋಳ ಖರೀದಿ ಮಾಡಿ ಹಣ ನೀಡದೇ ವಂಚಿಸಿದ್ದ ವ್ಯಕ್ತಿ ಮನೆಗೆ ದಿಢೀರ್​ ನುಗ್ಗಿದ ರೈತರು ಮನೆಯಲ್ಲಿದ್ದವರನ್ನು ಕೂಡಿ ಹಾಕಿ‌ ಪ್ರತಿಭಟನೆ ನಡೆಸಿದ್ದಾರೆ.

farmers protest infront of Merchant house in ranebennur
ಮೆಕ್ಕೆಜೋಳದ ಹಣ ನೀಡದೆ ವಂಚನೆ: ವ್ಯಾಪಾರಿ ಮನೆಗೆ ನುಗ್ಗಿ ರೈತರ ಪ್ರತಿಭಟನೆ

By

Published : Oct 7, 2020, 4:15 PM IST

ರಾಣೇಬೆನ್ನೂರು(ಹಾವೇರಿ):ಮೆಕ್ಕೆಜೋಳ ಖರೀದಿ ಮಾಡಿ ಹಣ ನೀಡದೇ ವಂಚಿಸಿದ್ದ ವ್ಯಕ್ತಿ ಮನೆ ಮುಂದೆ ರೈತರು ಪ್ರತಿಭಟನೆ ನಡೆಸಿದ್ದಾರೆ.

ಮೆಕ್ಕೆಜೋಳದ ಹಣ ನೀಡದೆ ವಂಚನೆ: ವ್ಯಾಪಾರಿ ಮನೆಗೆ ನುಗ್ಗಿ ರೈತರ ಪ್ರತಿಭಟನೆ

ರಾಣೇಬೆನ್ನೂರು ನಗರದ ರಾಜಣ್ಣ ಆನ್ವೇರಿ ಎಂಬುವವರು ಹಾವೇರಿ ಜಿಲ್ಲೆಯ ಕಾಟೇನಹಳ್ಳಿ, ಬರಡಿ, ಕೆಂಗೊಂಡ, ಕಲ್ಲದೇವರ, ತಿಮ್ಮನಹಳ್ಳಿ, ಅಗಡಿಯ ಸುಮಾರು 150 ರೈತರಿಗೆ ವಂಚಿಸಿದ್ದಾರೆ ಎನ್ನಲಾಗಿದೆ. ರಾಜಣ್ಣ ಆನ್ವೇರಿ ಮೆಕ್ಕೆಜೋಳ ವ್ಯಾಪಾರಿಯಾಗಿದ್ದು, ಅನೇಕ ರೈತರಿಂದ ಮೆಕ್ಕೆಜೋಳ ಖರೀದಿ ಮಾಡಿದ್ದರು. ಆದರೆ, ಕಳೆದ ಒಂದು ವರ್ಷದಿಂದ ರೈತರಿಗೆ ಹಣ ನೀಡದೇ ತಲೆ ಮರೆಸಿಕೊಂಡಿದ್ದಾರೆ.

ಇದರಿಂದ ರೊಚ್ಚಿಗೆದ್ದ ರೈತರು ದಿಢೀರ್​ ರಾಜಣ್ಣ ಮನೆಗೆ ನುಗ್ಗಿ ಮನೆಯಲ್ಲಿದ್ದವರನ್ನು ಕೂಡಿ ಹಾಕಿ‌ ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ಸ್ಥಳಾಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ABOUT THE AUTHOR

...view details