ಹಾವೇರಿ :ಯುಟಿಪಿ ಕಾಲುವೆಗಳಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಸರಿಯಾದ ಪರಿಹಾರ ದೊರೆತಿಲ್ಲ ಎಂದು ಆರೋಪಿಸಿ ರೈತರು ಯುಟಿಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಯುಟಿಯ ಕಚೇರಿ ಮುಂದೆ ರೈತರ ಪ್ರತಿಭಟನೆ ರಾಣೆಬೆನ್ನೂರು ಮತ್ತು ರಟ್ಟಿಹಳ್ಳಿ ತಾಲೂಕಿನ ನೂರಾರು ರೈತರು ನಗರದ ಹೊರ ಭಾಗದಲ್ಲಿರುವ ಯುಟಿಪಿ ಕಚೇರಿಯ ಮುಖ್ಯ ಆವರಣದಲ್ಲಿ ಮಲಗುವ ಮೂಲಕ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು ಇಪ್ಪತ್ತು ವರ್ಷಗಳ ಹಿಂದೆ ತುಂಗಾ ಮೇಲ್ದಂಡೆ ಯೋಜನೆಗೆ ಅಧಿಕಾರಿಗಳು ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ. ಆದರೆ ಇಂದಿಗೂ ಕೂಡ ಪರಿಹಾರ ದೊರೆತಿಲ್ಲ ಎಂದು ರೈತರ ತಿಳಿಸಿದರು.
ರೈತರ ಸಮಸ್ಯೆ ಬಗ್ಗೆ ಯುಟಿಪಿ ಇಲಾಖೆ ಮುಖ್ಯ ಇಂಜಿನಿಯರ್ ಎಂ.ಬಿ.ರವಿ ಮಾತನಾಡಿ, ರೈತರ ಸುಮಾರು 666 ಪ್ರಕರಣಗಳು ಬಾಕಿ ಉಳಿದಿವೆ. ಈಗಾಗಲೇ ಈ ಪ್ರಕರಣಗಳು ಬೆಳಗಾವಿ ವಿಶೇಷ ಭೂಸ್ವಾಧೀನ ಅಧಿಕಾರಿ ಮುಂದಿದ್ದು, ಅಲ್ಲಿನ ಅಧಿಕಾರಿಗಳು ರೈತರ ಪ್ರಕರಣಗಳನ್ನ ಬಗೆಹರಿಸುತ್ತಿಲ್ಲ. ಇಲ್ಲಿರುವ ಎಸ್ಎಲ್ಒ ಕಚೇರಿಯ ಒಳಗಡೆ ಅಧಿಕೃತ ಅಧಿಕಾರಿಗಳಿಲ್ಲ. ರೈತರ ಎಲ್ಲ ಕೆಲಸಗಳನ್ನು ಇಲ್ಲಿರುವ ಪ್ರಥಮ ದರ್ಜೆ ಅಧಿಕಾರಿ ಮಾಡುತ್ತಿದ್ದಾರೆ. ಇದು ಯುಟಿಪಿ ಇಂಜಿನಿಯರ್ಗಳ ತಪ್ಪಲ್ಲ ಎಂದು ವಿವರಿಸಿದರು.