ಹಾವೇರಿ :ಹೆಚ್ಚು ಬಿತ್ತನೆ ಬೀಜ ವಿತರಿಸುವಂತೆ ಆಗ್ರಹಿಸಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದ ರೈತ ಸಂಪರ್ಕ ಕೇಂದ್ರದ ಮುಂದೆ ರೈತರು ಪ್ರತಿಭಟನೆ ನಡೆಸಿ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಇಲಾಖೆಯಿಂದ ಹೆಚ್ಚು ಬಿತ್ತನೆ ಬೀಜ ನೀಡುವಂತೆ ಒತ್ತಾಯಿಸಿ ರೈತರ ಪ್ರತಿಭಟನೆ - more seeds
ಹೆಚ್ಚು ಬಿತ್ತನೆ ಬೀಜ ವಿತರಿಸುವಂತೆ ಆಗ್ರಹಿಸಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದ ರೈತ ಸಂಪರ್ಕ ಕೇಂದ್ರದ ಮುಂದೆ ರೈತರು ಪ್ರತಿಭಟನೆ ನಡೆಸಿದರು.
ರೈತರ ಪ್ರತಿಭಟನೆ
ಕೃಷಿ ಇಲಾಖೆ ಒಂದು ಎಕರೆಗೆ 5 ಕೆಜಿಯ ಒಂದು ಪ್ಯಾಕೆಟ್ ಬಿತ್ತನೆ ಬೀಜ ನೀಡುತ್ತಿದೆ. ಇದರ ಬದಲು ಎಕರೆಗೆ ಎರಡು ಪ್ಯಾಕೆಟ್ ನೀಡುವಂತೆ ರೈತರು ಒತ್ತಾಯಿಸಿದರು. ಈಗ ನೀಡುತ್ತಿರುವ ಐದು ಕೆಜಿಯ ಪ್ಯಾಕೆಟ್ ಒಂದು ಎಕರೆಗೆ ಸಾಲುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದು ಎಕರೆಗೆ ಎರಡು ಪ್ಯಾಕೆಟ್ ಬೀಜ ವಿತರಿಸುವವರೆಗೊ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು. ಮಾಸ್ಕ್ ಧರಿಸಿ ಪ್ರತಿಭಟನೆ ನಡೆಸುವ ಮೂಲಕ ರೈತರು ಗಮನ ಸೆಳೆದರು.