ಕರ್ನಾಟಕ

karnataka

ETV Bharat / state

ಕೃಷಿ ಸಚಿವ ಬಿ.ಸಿ.ಪಾಟೀಲ್​ ಕ್ಷೇತ್ರದಲ್ಲಿ ಮುಂದುವರಿದ ರೈತರ ಹೋರಾಟ

ಭೂಸ್ವಾಧೀನ ವಿರೋಧಿಸಿ ರಟ್ಟೀಹಳ್ಳಿ - ಹಿರೇಕೆರೂರು ತಾಲೂಕಿನ ರೈತರು ಭಗತ್ ಸಿಂಗ್ ವೃತ್ತದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ರೈತರ ಹೋರಾಟ
ರೈತರ ಹೋರಾಟ

By

Published : Dec 4, 2020, 2:55 PM IST

ಹಾವೇರಿ: ಭೂಸ್ವಾಧೀನ ವಿರೋಧಿಸಿ ಜಿಲ್ಲೆಯ ರಟ್ಟೀಹಳ್ಳಿ ಪಟ್ಟಣದ ಭಗತ್ ಸಿಂಗ್ ವೃತ್ತದಲ್ಲಿ ರೈತರು ನಡೆಸುತ್ತಿರುವ ಹೋರಾಟ ಮುಂದುವರೆದಿದೆ.

ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ರಟ್ಟೀಹಳ್ಳಿ - ಹಿರೇಕೆರೂರು ತಾಲೂಕಿನ ರೈತರು ಧಾರವಾಡ ಹೈಕೋರ್ಟ್​ನ ಹಿರಿಯ ವಕೀಲ ಬಿ.ಡಿ.ಹಿರೇಮಠ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಪ್ರತಿಭಟನಾ ಸ್ಥಳದಲ್ಲೇ ನಿವೃತ್ತ ಯೋಧ ರಂಗಪ್ಪ ಬಡಪ್ಪನವರ ಅಸ್ವಸ್ಥರಾಗಿದ್ದು, ಕೂಡಲೇ ಆ್ಯಂಬುಲೆನ್ಸ್ ಕರೆಯಿಸಿ, ಅವರಿಗೆ ಚಿಕಿತ್ಸೆ ನೀಡಲಾಯಿತು.

ಹಾವೇರಿಯಲ್ಲಿ ರೈತರ ಉಪವಾಸ ಸತ್ಯಾಗ್ರಹ

ತುಂಗಭದ್ರಾ ನದಿಯಿಂದ ಶಿಕಾರಿಪುರ ತಾಲೂಕಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಉಡಗಣಿ - ತಾಳಗುಂದ - ಹೊಸೂರು ಭಾಗದ ರೈತರ ಜಾಗವನ್ನು ಸ್ವಾಧೀನ ಮಾಡಿಕೊಂಡಿದ್ದು, ಇದನ್ನು ವಿರೋಧಿಸಿ ರೈತರು ಹೋರಾಟ ಮುಂದುವರೆಸಿದ್ದಾರೆ. ಸತ್ಯಾಗ್ರಹ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಸಹ ಏರ್ಪಡಿಸಲಾಗಿದೆ.

ಇದನ್ನೂ ಓದಿ:ಭೂಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ಸುರಪುರ ರೈತರಿಂದ ಪ್ರತಿಭಟನೆ

ABOUT THE AUTHOR

...view details