ಕರ್ನಾಟಕ

karnataka

ETV Bharat / state

ಗೋಮಾಳದಲ್ಲಿ ಆರಂಭವಾದ ಸರ್ಕಾರಿ ಕಾಮಗಾರಿ.... ರೈತರಿಂದ ಪ್ರತಿಭಟನೆ! - latest haveri latest news

ಅಕ್ಕೂರು ಗ್ರಾಮದಲ್ಲಿನ ಗೋಮಾಳ ಜಾಗದಲ್ಲಿ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿರುವ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ.

farmers-protest
ಸರ್ಕಾರದ ವಿರುದ್ದ ರೈತರ ಪ್ರತಿಭಟನೆ

By

Published : May 31, 2020, 11:36 PM IST

ಹಾವೇರಿ :ಅಕ್ಕೂರು ಗ್ರಾಮದಲ್ಲಿನ ಗೋಮಾಳ ಜಾಗದಲ್ಲಿ ವಿವಿಧ ಸರ್ಕಾರಿ ಇಲಾಖೆಯವರು ಕಾಮಗಾರಿ ಆರಂಭಿಸಲು ಮುಂದಾಗಿದ್ದಾರೆ. ಈ ಮೂಲಕ 40 ವರ್ಷದಿಂದ ಅದೇ ಭೂಮಿಯನ್ನು ನಂಬಿಕೊಂಡಿರುವ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮದ ಸರ್ವೆ ನಂಬರ್ 98/2ರಲ್ಲಿರುವ ಗೋಮಾಳದಲ್ಲಿ ಸುಮಾರು 56 ರೈತ ಕುಟುಂಬಗಳು ಸುಮಾರು 40 ವರ್ಷದಿಂದ ಸಾಗುವಳಿ ಮಾಡಿಕೊಂಡು ಬರುತ್ತಿವೆ. ಇದೀಗ ಕಾಮಗಾರಿ ಆರಂಭಿಸಿ ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿರುವುದಕ್ಕೆ ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಸರ್ಕಾರದ ವಿರುದ್ದ ರೈತರ ಪ್ರತಿಭಟನೆ

ಈ ಕೂಡಲೇ ವಿವಿಧ ಇಲಾಖೆಗಳ ಅಧಿಕಾರಿಗಳು ಇಲ್ಲಿ ಕೈಗೊಂಡಿರುವ ಕಾಮಗಾರಿ ನಿಲ್ಲಿಸಬೇಕು. ಗೋಮಾಳ ಜಾಗದಲ್ಲಿ ಒಕ್ಕಲುತನ ಮಾಡುತ್ತಿದ್ದ ರೈತರಿಗೆ ಗೋಮಾಳ ಜಾಗವನ್ನ ನೀಡಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.

ABOUT THE AUTHOR

...view details