ಕರ್ನಾಟಕ

karnataka

ETV Bharat / state

ಮಳೆಯ ಆರ್ಭಟಕ್ಕೆ ಕೆರೆಗಳಂತಾದ ಜಮೀನುಗಳು.. ಬಿತ್ತನೆ ಮಾಡಿದ್ದೆಲ್ಲ ನೀರಲ್ಲಿ ಹೋಮ - pools by heavy rainfall

ಮಳೆ ಆರಂಭವಾಗುತ್ತಿದ್ದಂತೆ ಹಚ್ಚಿದ ಮೆಣಸಿನ ಗಿಡಗಳು, ಚೆಂಡು ಹೂವಿನ ಗಿಡಗಳು ಸಹ ಅಧಿಕ ನೀರಿನಿಂದ ಹಾಳಾಗಲಾರಂಭಿಸಿವೆ. ಇದು ಸಹ ರೈತರನ್ನ ಆತಂಕ್ಕೀಡುಮಾಡಿದೆ. ಮಳೆ ಇದೇ ರೀತಿ ಮುಂದುವರೆದರೆ ಎರಡನೇ ಬಿತ್ತನೆ ಮಾಡಲು ಸಹ ಆಗುವುದಿಲ್ಲ ಎಂಬ ಹತಾಶೆಯನ್ನು ರೈತರು ವ್ಯಕ್ತಪಡಿಸಿದ್ದಾರೆ..

ಕೆರೆಗಳಂತಾದ ಜಮೀನು
ಕೆರೆಗಳಂತಾದ ಜಮೀನು

By

Published : Jun 22, 2021, 10:55 PM IST

ಹಾವೇರಿ :ಮುಂಗಾರು ಆರಂಭವಾಗುತ್ತಿದ್ದಂತೆ ಖುಷಿಯಾಗಿದ್ದ ರೈತನೋರ್ವ ತರಾತುರಿಯಲ್ಲಿ ಜಮೀನು ಹದ ಮಾಡಿಕೊಂಡಿದ್ದ. ಮಳೆರಾಯ ಸ್ವಲ್ಪ ಬಿಡುವು ನೀಡುತ್ತಿದ್ದಂತೆ ಬಿತ್ತನೆ ಕಾರ್ಯ ಸಹ ಮಾಡಿದ್ದ. ಇನ್ನೇನು ಬಿತ್ತನೆ ಮಾಡಿದ ಬೀಜ ಮೊಳಕೆಯೊಡೆದು ಮೇಲೆ ಬರುವ ವೇಳೆಗೆ ಮಳೆರಾಯನ ಆರ್ಭಟ ಶುರುವಾಗಿದೆ. ಪರಿಣಾಮ ತಗ್ಗಿನಲ್ಲಿರುವ ಜಮೀನುಗಳಲ್ಲಿ ಬಿತ್ತನೆ ಮಾಡಿದ ಬೀಜಗಳು ಅಲ್ಲಿಯೇ ಕಮರಿವೆ.

ಸೋಯಾಬಿನ್,ಶೇಂಗಾ,ಹತ್ತಿ,ಭತ್ತ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲು ಮುಂದಾಗಿದ್ದ ರೈತನಿಗೆ ಆರಂಭದಲ್ಲೇ ನಿರಾಶೆ ಮೂಡಿದೆ. ಅಧಿಕ ಮಳೆಯಿಂದಾಗಿ ಜಮೀನುಗಳಲ್ಲಿ ನೀರು ನಿಂತಿದ್ದು ಜಮೀನುಗಳು ಕೆರೆ ಹೊಂಡಗಳಂತಾಗಿವೆ. ಎಕರೆಗೆ 15 ಸಾವಿರಕ್ಕೂ ಅಧಿಕ ರೂ. ಖರ್ಚು ಮಾಡಿ ಬಿತ್ತನೆ ಮಾಡಿದ್ದರು. ಇದೀಗ ಮಳೆ ಪರಿಣಾಮ ಬಿತ್ತನೆ ಬೀಜಗಳು ಮಣ್ಣಲ್ಲಿ ಕಮರಿ ಹೋಗಿವೆ. ಆಳುಗಳು, ಗೊಬ್ಬರ, ಬೀಜ ಎಂದು ರೈತರು ಮಾಡಿದ ಎಲ್ಲ ಖರ್ಚು ಹೊಳೆಯಲ್ಲಿ ಹೋಮ ಮಾಡಿದಂತಾಗಿದೆ.

ಮಳೆಯ ಆರ್ಭಟಕ್ಕೆ ಕೆರೆಗಳಂತಾದ ಜಮೀನುಗಳು

ಮಳೆರಾಯ ಬಿಡುವು ನೀಡಿದ ಮೇಲೆ ಜಮೀನು ಮತ್ತೆ ಹದ ಮಾಡಿಕೊಳ್ಳಬೇಕು. ಹದಕ್ಕೆ ತಕ್ಕಂತೆ ಬಿತ್ತನೆ ಬೀಜ ಬಿತ್ತಿ ಬೆಳೆ ಯಾವ ರೀತಿ ಬರುತ್ತದೆ ಎಂಬುದನ್ನು ನೋಡಬೇಕಿದೆ. ಅದಕ್ಕಾಗಿ ನಾವು ಮತ್ತೇ ಸಾಲ ಮಾಡಿ ಇಲ್ಲವೇ ಆಭರಣಗಳನ್ನು ಒತ್ತೆ ಇಟ್ಟು ಹಣ ತರಬೇಕಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಮಳೆ ಆರಂಭವಾಗುತ್ತಿದ್ದಂತೆ ಹಚ್ಚಿದ ಮೆಣಸಿನ ಗಿಡಗಳು, ಚೆಂಡು ಹೂವಿನ ಗಿಡಗಳು ಸಹ ಅಧಿಕ ನೀರಿನಿಂದ ಹಾಳಾಗಲಾರಂಭಿಸಿವೆ. ಇದು ಸಹ ರೈತರನ್ನ ಆತಂಕ್ಕೀಡುಮಾಡಿದೆ. ಮಳೆ ಇದೇ ರೀತಿ ಮುಂದುವರೆದರೆ ಎರಡನೇ ಬಿತ್ತನೆ ಮಾಡಲು ಸಹ ಆಗುವುದಿಲ್ಲ ಎಂಬ ಹತಾಶೆಯನ್ನು ರೈತರು ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details