ಹಾವೇರಿ: ಕಾರಹುಣ್ಣಿಮೆ ರೈತರ ಪಾಲಿನ ಸಂಭ್ರಮದ ಹಬ್ಬಗಳಲ್ಲೊಂದು. ಪ್ರತಿ ವರ್ಷ ಉತ್ತರ ಕನಾ೯ಟಕ ಭಾಗದ ರೈತರು ಕಾರಹುಣ್ಣಿಮೆ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸುತ್ತಾರೆ. ಹಾವೇರಿಯ ಕರ್ಜಗಿ ಗ್ರಾಮದಲ್ಲೂ ಸಹ ಈ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಯಿತು.
ಹಬ್ಬದ ಆಚರಣೆ ಹೇಗಿರುತ್ತದೆ? : ಮೂರು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸಕ್ಕೆ ಬ್ರಹ್ಮಲಿಂಗೇಶ್ವರ ಜಾತ್ರೆ ಎಂದೇ ಕರೆಯಲಾಗುತ್ತದೆ. ಮೊದಲ ದಿನ ಹೂನ್ನುಗ್ಗಿ ಆಚರಿಸಿದರೆ, ಕೊನೆಯ ಎರಡು ದಿನ ದೊಡ್ಡಕ್ಕಿ ಮತ್ತು ಸಣ್ಣಕ್ಕಿ ಬಂಡಿ ಓಡಿಸಲಾಗುತ್ತದೆ. ಈ ಬಂಡಿ ಓಡಿಸುವಾಗ ಯಾವುದೇ ಅವಘಡ ನಡೆಯುವುದಿಲ್ಲ. ಆಕಸ್ಮಿಕ ಅವಘಡ ಸಂಭವಿಸಿದರೂ ಆದು ಬ್ರಹ್ಮಲಿಂಗೇಶ್ವರ ದೇವರ ಆಶೀರ್ವಾದ ಎಂದು ನಂಬಲಾಗುತ್ತದೆ.
ಇದನ್ನೂ ಓದಿ :ಅತ್ತ ಕೊರೊನಾ ನಾಗಾಲೋಟ : ಹಾವೇರಿಯಲ್ಲಿ ಇತ್ತ ನಿಯಮ ಉಲ್ಲಂಘಿಸಿ ಹೋರಿ ಓಟ
ಕರ್ಜಗಿ ಗ್ರಾಮದಲ್ಲಿ ನಡೆದ ಕಾರಹುಣ್ಣಿಮೆ ಹಬ್ಬ ಹೇಗಿತ್ತು? : ಕಾರಹುಣ್ಣಿಮೆ ಹಿನ್ನೆಲೆ ಕರ್ಜಗಿ ಗ್ರಾಮವನ್ನು ನವವಧುವಿನಂತೆ ಸಿಂಗಾರಗೊಳಿಸಲಾಗಿತ್ತು. ಮೊದಲ ದಿನ ರಾಸುಗಳಿಗೆ ಸಿಹಿ ಉಣಿಸುವ ಹೂನ್ನುಗ್ಗಿ ಕಾರ್ಯಕ್ರಮ ಆಚರಿಸಲಾಯಿತು. ಹೂನ್ನುಗ್ಗಿ ಮಾರನೇಯ ದಿನ ದೊಡ್ಡಕ್ಕಿ ಬಂಡಿ ಓಡಿಸಲಾಯಿತು. ಕೊನೆಯ ದಿನ ಸಣ್ಣಕ್ಕಿ ಬಂಡಿ ಓಡಿಸಲಾಯಿತು. ಈ ಬಂಡಿಯ ವಿಶೇಷತೆ ಎಂದರೆ ಬಂಡಿ ಓಡಿಸುವಾಗ ಯಾವುದೇ ಸಮಸ್ಯೆಗಳು ಕಂಡು ಬರುವುದಿಲ್ಲ. ಒಂದು ವೇಳೆ ಏನಾದರೂ ದುರಂತ ಸಂಭವಿಸಿದರೆ ಅದು ದೇವರ ವರಪ್ರಸಾದ ಎಂದು ತಿಳಿಯಲಾಗುತ್ತದೆ. ಪ್ರತಿ ಬಂಡಿಯಲ್ಲಿ ಏಳು ಜನ ವೀರಗಾರರಿರುತ್ತಾರೆ. ಇವರನ್ನು ಆರಿಸುವ ಪ್ರಕ್ರಿಯೆ ಸಹ ವಿಭಿನ್ನವಾಗಿದ್ದು, ಇವರು 9 ದಿನಗಳ ಕಾಲ ಉಪವಾಸ ನಡೆಸುತ್ತಾರೆ. ಕಾರ ಹುಣ್ಣಿಮೆಯ ಆಚರಣೆ ನಂತರ ಉಪವಾಸ ಕೈ ಬಿಡುತ್ತಾರೆ.