ಕರ್ನಾಟಕ

karnataka

ETV Bharat / state

ಸಾಲಬಾಧೆಗೆ ನೊಂದು ನೇಣಿಗೆ ಶರಣಾದ ಅನ್ನದಾತ - Latest farmer Sucide news

ಸಾಲಬಾಧೆಯಿಂದ ಬೇಸತ್ತು ರೈತನೋರ್ವ ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ಚಂದಾಪುರದಲ್ಲಿ ಗ್ರಾಮದಲ್ಲಿ ನಡೆದಿದೆ.

farmer-suicide-in-haveri
ಹಾವೇರಿಯಲ್ಲಿ ನೇಣಿಗೆ ಕೊರಳೊಡ್ಡಿದ ರೈತ..

By

Published : Feb 2, 2020, 11:45 AM IST

ಹಾವೇರಿ: ಸಾಲಬಾಧೆಗೆ ಬೇಸತ್ತು ರೈತನೋರ್ವ ನೇಣಿಗೆ ಕೊರಳೊಡ್ಡಿರುವ ಘಟನೆ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಚಂದಾಪುರದಲ್ಲಿ ನಡೆದಿದೆ.

ಮೃತ ರೈತನನ್ನು 50 ವರ್ಷದ ಹನುಮಂತಪ್ಪ ಜಟ್ಟೆಪ್ಪನವರ್ ಎಂದು ಗುರುತಿಸಲಾಗಿದೆ. ಹನುಮಂತಪ್ಪ 8 ಎಕರೆ ಭೂಮಿಯಲ್ಲಿ ಬೇಸಾಯ ಮಾಡಿದ್ದ. ಜಮೀನಿನಲ್ಲಿ ಕೆಲಸ ಮಾಡಿದ್ದವರಿಗೆ ನೀಡಬೇಕಾಗಿದ್ದ ಮೂರು ಲಕ್ಷ ರೂಪಾಯಿ ಕೂಲಿ ಹಣ ಬಾಕಿ ಉಳಿಸಿಕೊಂಡಿದ್ದ. ಇದಲ್ಲದೆ ಬೇರೆ ಬೇರೆ ಕಡೆ ಸುಮಾರು ಎರಡು ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದ ಎನ್ನಲಾಗ್ತಿದೆ. ಇದರಿಂದ ಮನನೊಂದ ಹನುಮಂತಪ್ಪ ಜಮೀನಿನಲ್ಲಿ ನೇಣು ಹಾಕಿಕೊಂಡಿದ್ದಾನೆ.

ಈ ಕುರಿತಂತೆ ಬಂಕಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ABOUT THE AUTHOR

...view details