ಹಾವೇರಿ: ರೈತನೊಬ್ಬ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಸವಣೂರು ತಾಲೂಕಿನ ಹಳೇಮನ್ನಂಗಿ ಗ್ರಾಮದಲ್ಲಿ ನಡೆದಿದೆ.
ಹಾವೇರಿಯಲ್ಲಿ ಸಾಲಭಾದೆಯಿಂದ ಅನ್ನದಾತ ಆತ್ಮಹತ್ಯೆಗೆ ಶರಣು - ರೈತನೊಬ್ಬ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣು
ಸಾಲಭಾದೆ ತಳಲಾರದೇ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.
farmer suicide
ಬಸವರಾಜ್ ದೇವಗಿರಿ(55) ಆತ್ಮಹತ್ಯೆಗೆ ಶರಣಾದ ರೈತ. ತಾನು ಬ್ಯಾಂಕ್ ಮತ್ತು ಕೈ ಸಾಲ ಅಂತಾ 4 ಲಕ್ಷ ರೂಪಾಯಿ ಸಾಲ ಮಾಡಿದ್ದೇನೆ. ಕೋರೆಗೆ ಹಾಕಿಸಿಕೊಂಡ ನಾಲ್ಕು ಎಕರೆ ಮತ್ತು ಸ್ವಂತ ಮೂರು ಎಕರೆ ಜಮೀನಿನಲ್ಲಿ ಬೆಳೆದ ಬೆಳೆಗೆ ಮಳೆ ನೀರು ನುಗ್ಗಿದೆ. ಎರಡು ತಿಂಗಳಲ್ಲಿ ಮಗಳ ಮದುವೆ ಇದ್ದು, ನಾನು ಹೇಗೆ ಎದುರಿಸಲಿ ಎಂದು ಪತ್ರದಲ್ಲಿ ಬರೆದಿದ್ದಾನೆ.
ಜಮೀನಿನಲ್ಲಿ ವಿಷ ಸೇವಿಸಿ ಈತ ಆತ್ಮಹತ್ಯೆಗೆ ಶರಣಾಗಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.