ಹಾವೇರಿ: ಜಿಲ್ಲೆಯ ಹಾನಗಲ್, ಶಿಗ್ಗಾವಿ ಮತ್ತು ಸವಣೂರು ತಾಲೂಕುಗಳ ಕೆರೆ ಅಭಿವೃದ್ಧಿ, ಜಲಾಶಯ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ರೈತರು ಬುಧವಾರವೂ ಧರಣಿ ಮುಂದುವರೆಸಿದರು.
ವಿವಿಧ ಬೇಡಿಕೆ ಈಡೇರಿಸುವಂತೆ 7ನೇ ದಿನವೂ ರೈತರಿಂದ ಧರಣಿ - undefined
ಹಾವೇರಿ ಜಿಲ್ಲೆಯ ಕೆರೆ ಅಭಿವೃದ್ಧಿ ನಿರ್ಮಾಣಕ್ಕೆ ಒತ್ತಾಯಿಸಿ ಅಖಿಲ ಕರ್ನಾಟಕ ರೈತ ಸಂಘದಿಂದ ನಿರಂತರ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ವಿವಿಧ ಬೇಡಿಕೆಗೆ ಸರ್ಕಾರ ಕೂಡಲೆ ಸ್ಪಂದಿಸಬೇಕು ಎಂದು ರೈತರು ಅಗ್ರಹಿಸಿದರು.
![ವಿವಿಧ ಬೇಡಿಕೆ ಈಡೇರಿಸುವಂತೆ 7ನೇ ದಿನವೂ ರೈತರಿಂದ ಧರಣಿ](https://etvbharatimages.akamaized.net/etvbharat/prod-images/768-512-3739084-thumbnail-3x2-hvr.jpg)
ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಧರಣಿ ನಡೆದುತ್ತಿರುವ ರೈತರು
ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಧರಣಿ ನಡೆದುತ್ತಿರುವ ರೈತರು
ಅಖಿಲ ಕರ್ನಾಟಕ ರೈತ ಸಂಘದಿಂದ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹ ಬುಧವಾರ 7ನೇ ದಿನಕ್ಕೆ ಕಾಲಿಟ್ಟಿದೆ.
ನಮ್ಮ ಬೇಡಿಕೆ ಈಡೇರದೆ ನಾವು ಹಿಂದೆ ಸರಿಯುವ ಮಾತೆ ಇಲ್ಲ. ಸಂಘದ ಹೋರಾಟಕ್ಕೆ ಹಲವು ಸಂಘಟನೆಗಳು ಕೂಡ ಬೆಂಬಲ ವ್ಯಕ್ತಪಡಿಸಿವೆ ಎಂದು ರೈತ ಸಂಘದ ಮುಂಖಡ ಪ್ರಕಾಶ ಬಾರ್ಕಿ ಹೇಳಿದರು.