ಹಾವೇರಿ:ತುಂಬಿ ಹರಿಯುವ ನದಿಯಲ್ಲಿ ಎತ್ತಿನಗಾಡಿ ದಾಟಿಸಿಕೊಂಡು ಜಮೀನಿಗೆ ರೈತ ಕುಟುಂಬವೊಂದು ಕೃಷಿ ಕೆಲಸಕ್ಕೆ ಹೋಗಿ ಬಂದ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ರಟ್ಟೀಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಬಳಿ ಇರುವ ಕುಮುದ್ವತಿ ನದಿಯಲ್ಲಿ ಈ ಕುಟುಂಬ ಹರಸಾಹಸ ಮಾಡಿದೆ. ಎತ್ತಿನಬಂಡಿಯಲ್ಲಿ ಏಳು ಜನ, ಬಂಡಿಯ ಮುಂದೆ ಒಬ್ಬ ಹೋಗಿ ಈ ಕುಟುಂಬ ಕೃಷಿ ಕೆಲಸ ಮಾಡಿದೆ ಎಂದು ತಿಳಿದು ಬಂದಿದೆ.
ಮಾಸೂರು - ಮೇದೂರು ಗ್ರಾಮದ ನಡುವೆ ತುಂಬಿ ಹರಿಯುತ್ತಿರುವ ಕುಮುದ್ವತಿಯಲ್ಲಿ ಎತ್ತಿನಬಂಡಿ ಮುಳುಗೋ ಹಂತದಲ್ಲಿದ್ರೂ ಈ ರೈತ ಕುಟುಂಬ ಪ್ರಯಾಣ ಬೆಳಸಿದೆ. ಜೀವದ ಹಂಗು ತೊರೆದು ಜಮೀನು ಕೆಲಸಕ್ಕೆ ಹೋಗಿ ಬಂದ ರೈತ ಕುಟುಂಬ ಸಾಹಸಕ್ಕೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.