ಹಾವೇರಿ:ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ಅನ್ನದಾತನನ್ನು ಸಂಕಷ್ಟದಲ್ಲಿ ಸಿಲುಕಿಸಿದೆ. ಮುಂಗಾರು ಆರಂಭದಲ್ಲಿ ಬಿಟ್ಟೂಬಿಡದೆ ಸುರಿದ ಮಳೆಯಿಂದಾಗಿ ರೈತರು ಎರೆಡೆರಡು ಬಾರಿ ಬಿತ್ತನೆ ಮಾಡಿದ್ದರು. ಹಲವು ರೈತರು ಸಾಲ ಮಾಡಿ ಬೀಜ ಬಿತ್ತಿದ್ದರು.
ಮೆಕ್ಕೆಜೋಳ, ಸೋಯಾಬಿನ್, ಶೇಂಗಾ ಮತ್ತು ಹತ್ತಿ ಸೇರಿದಂತೆ ವಿವಿಧ ಬೆಳೆಗಳು ಸೊಂಪಾಗಿ ಬೆಳೆದಿದ್ದವು. ಇನ್ನೇನು ಫಸಲು ನೀಡಲಾರಂಭಿಸಿದ್ದವು. ಅಷ್ಟರಲ್ಲಿ ವರುಣದೇವನಿಂದ ಬೆಳೆಗಳೆಲ್ಲ ನೀರು ಪಾಲಾಗಿವೆ.
ರೈತರಾದ ಚನ್ನಬಸಯ್ಯ ಹಿರೇಮಠ ಅವರು ಮಾತನಾಡಿದರು ಅದರಲ್ಲೂ ಮೆಕ್ಕೆಜೋಳ ಬೆಳೆದ ರೈತ ಮಳೆ ನಿಂತ ಮೇಲೆ ತೆನೆ ಮುರಿದು ಮಾರಾಟ ಮಾಡಬಹುದು ಎಂದುಕೊಂಡಿದ್ದ. ಆದರೆ ವರ್ಷಧಾರೆಯ ಆರ್ಭಟಕ್ಕೆ ತೆನೆಗಳಲ್ಲಿ ಮೊಳಕೆಯೊಡೆಯಲಾರಂಭಿಸಿದೆ. ಇಷ್ಟು ದಿನ ನಮ್ಮ ಮೆಕ್ಕೆಜೋಳ ತೆನೆಯಲ್ಲಿದೆ, ತೊಂದರೆಯಾಗುವುದಿಲ್ಲ ಎಂದುಕೊಂಡಿದ್ದ ರೈತ ತೊಂದರೆಗೆ ಸಿಲುಕಿದ್ದಾನೆ.
ವಿಪರೀತ ಮಳೆಗೆ ಮೆಕ್ಕೆಜೋಳ ಬೆಳೆ ಕೊಳೆತಿರುವುದು ನೋವು ತೋಡಿಕೊಂಡ ಅನ್ನದಾತ: "ಮೆಕ್ಕೆಜೋಳಕ್ಕೆ ಉತ್ತಮ ಬೆಲೆ ಇದೆ. ಮಾರಾಟಕ್ಕೆ ಹೋಗಲು ರಸ್ತೆಗಳಿಲ್ಲ. ಜಮೀನಿನಲ್ಲಿ ಬಿಟ್ಟ ತೆನೆಗಳು ಅಲ್ಲಲ್ಲಿಯೇ ಮೊಳಕೆಯೊಡೆಯಲಾರಂಭಿಸಿವೆ. ಈ ರೀತಿಯಾದರೆ ನಮ್ಮ ಬೆಳೆಯನ್ನು ಯಾರು ಖರೀದಿ ಮಾಡುತ್ತಾರೆ. ಖರೀದಿ ಮಾಡಿದರೂ ಬಾಯಿಗೆ ಬಂದ ದರಕ್ಕೆ ಕೇಳುತ್ತಾರೆ. ನಮ್ಮ ಜಾನುವಾರುಗಳಿಗೂ ಸಹ ಹಾಕಲು ಮೆಕ್ಕೆಜೋಳ ಬರುವುದಿಲ್ಲ" ಎಂದು ರೈತರೊಬ್ಬರು ನೋವು ತೋಡಿಕೊಂಡರು.
ಇದನ್ನೂ ಓದಿ:ದಾವಣಗೆರೆಯಲ್ಲಿ ಮಳೆ ಅಬ್ಬರ: 55.16 ಲಕ್ಷ ರೂ. ಬೆಳೆ ನಾಶ