ಹಾನಗಲ್ (ಹಾವೇರಿ): ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ರೈತ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಚಿಕ್ಕೇರಿಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. 52 ವರ್ಷದ ರೈತ ಚಂದ್ರಪ್ಪ ಜನಗೇರಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ವಿದ್ಯುತ್ ಸ್ಪರ್ಶಿಸಿ ಹೊಲದಲ್ಲಿ ರೈತನ ಮೃತ್ಯು - death of the farmer by the touch of electricity
ಜಮೀನಿಗೆ ನೀರು ಹಾಯಿಸಲು ಬೋರ್ವೆಲ್ ಬಳಿ ಬಂದಾಗ ವಿದ್ಯುತ್ ಸ್ಪರ್ಶಿಸಿ ರೈತ ಸಾವಿಗೀಡಾಗಿದ್ದಾನೆ. ಮಳೆ ಬಂದಿದ್ದ ಕಾರಣ ಶಾರ್ಟ್ ಸರ್ಕ್ಯೂಟ್ ಸಂಭವಿಸಿರಬಹುದು ಎನ್ನಲಾಗಿದ್ದು, ಹಾನಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲಿಯೇ ರೈತನ ಮೃತ್ಯು
ಜಮೀನಿನಲ್ಲಿ ನೀರು ಹಾಯಿಸಲು ಬೋರ್ವೆಲ್ ಸ್ಟಾರ್ಟ್ ಮಾಡಲು ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಹಾನಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಳೆಯಾಗುತ್ತಿದ್ದ ಸಂದರ್ಭ ಶಾರ್ಟ್ ಸರ್ಕ್ಯೂಟ್ಗೆ ರೈತ ಬಲಿಯಾಗಿರಬಹುದು ಎನ್ನಲಾಗಿದೆ.