ರಾಣೆಬೆನ್ನೂರು :ಗದ್ದೆಯಲ್ಲಿ ನೀರು ಹಾಯಿಸುವಾಗ ರೈತನಿಗೆ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಮೇಡ್ಲೇರಿ ಗ್ರಾಮದಲ್ಲಿ ನಡೆದಿದೆ.
ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟ ರೈತ - ranebennuru haveri latest news
ಗದ್ದೆಯಲ್ಲಿ ನೀರು ಹಾಯಿಸುವಾಗ ರೈತನಿಗೆ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಮೇಡ್ಲೇರಿ ಗ್ರಾಮದಲ್ಲಿ ನಡೆದಿದೆ.
ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟ ರೈತ
ಗ್ರಾಮದ ಪ್ರಕಾಶ ಬ್ರಹ್ಮಪ್ಪ ಬಡಿಗೇರ(50) ಮೃತಪಟ್ಟ ರೈತ. ಪ್ರಕಾಶ ತಮ್ಮ ಸ್ವಂತ ಜಮೀನಿನ ಒಳಗೆ ನೀರು ಹಾಯಿಸಲು ಬಂದಾಗ, ಗದ್ದೆಯಲ್ಲಿ ಪಂಪ್ಸೆಟ್ಗೆ ಜೋಡಿಸಿದ ವೈಯರ್ ಗದ್ದೆಯಲ್ಲಿ ಬಿದ್ದಿದೆ. ಇದನ್ನು ತಗೆದು ಹಾಕಲು ಮುಂದಾದಾಗ ವೈರ್ ತುಂಡಾಗಿದ್ದನ್ನು ಪರೀಕ್ಷಿಸದೆ ಮುಟ್ಟಿದ್ದಾರೆ. ತಕ್ಷಣ ವಿದ್ಯುತ್ ಪ್ರವಹಿಸಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.