ಹಾವೇರಿ:ಸಾಲಬಾಧೆಯಿಂದ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ರಾಣೆಬೆನ್ನೂರಿನ ಹೆಡಿಯಾಳ ಗ್ರಾಮದಲ್ಲಿ ನಡೆದಿದೆ.
ಸಾಲಬಾಧೆ, ಬೆಳೆ ಹಾನಿಯಿಂದ ಬೇಸತ್ತು ರಾಣೆಬೆನ್ನೂರಿನಲ್ಲಿ ರೈತ ಆತ್ಮಹತ್ಯೆ - ರಾಣೆಬೆನ್ನೂರಿನಲ್ಲಿ ರೈತ ಆತ್ಮಹತ್ಯೆ
ಕೈತುಂಬಾ ಸಾಲ ಮಾಡಿಕೊಂಡಿದ್ದ, ಬೆಳೆ ಹಾನಿಯಿಂದ ಬೇಸತ್ತಿದ್ದ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಹೆಡಿಯಾಳ ಗ್ರಾಮದ ರೈತನೊರ್ವ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸಾಲಬಾಧೆ, ಬೆಳೆ ಹಾನಿಯಿಂದ ಬೇಸತ್ತು ರಾಣೆಬೆನ್ನೂರಿನಲ್ಲಿ ರೈತ ಆತ್ಮಹತ್ಯೆ
ಸಾಲಬಾಧೆ, ಬೆಳೆ ಹಾನಿಯಿಂದ ಬೇಸತ್ತು ರಾಣೆಬೆನ್ನೂರಿನಲ್ಲಿ ರೈತ ಆತ್ಮಹತ್ಯೆ
ನಾಗಪ್ಪ ಚನ್ನಬಸಪ್ಪ ಪೂಜಾರ (50) ಮೃತ ರೈತ. ಮೂರು ಎಕರೆ ಜಮೀನು ಹೊಂದಿದ್ದ ನಾಗಪ್ಪ, ಬ್ಯಾಂಕ್ ಹಾಗೂ ಕೈಗಡವಾಗಿ ಆರು ಲಕ್ಷ ರೂ. ಸಾಲ ಮಾಡಿಕೊಂಡಿದ್ದ ಎನ್ನಲಾಗಿದ್ದು, ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳ ಸಂಪೂರ್ಣ ಹಾಳಾಗಿ ಹೋಗಿದ್ದರಿಂದ ಬೇಸತ್ತು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ರಾಣೆಬೆನ್ನೂರಿನ ಹಲಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.