ರಾಣೆಬೆನ್ನೂರು:ತಾಲೂಕಿನ ಮೇಡ್ಲೇರಿ ಗ್ರಾಮದಲ್ಲಿ ಕಳೆದ ಹದಿನೈದು ದಿನಗಳ ಹಿಂದೆ ಸುರಿದ ಜೋರು ಮಳೆಗೆ ಭತ್ತದ ಬೆಳೆ ಹಾನಿಯಾದ ಕಾರಣ, ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರವಾಹದಿಂದ ಬೆಳೆ ಹಾನಿ: ನೊಂದ ರೈತ ಆತ್ಮಹತ್ಯೆಗೆ ಶರಣು - Dileppa Bheemappa Boodanoor committed suicide
ಇತ್ತೀಚಿಗೆ ಮೇಡ್ಲೇರಿ ಗ್ರಾಮದಲ್ಲಿ ಸುರಿದ ಭಾರಿ ಮಳೆಯಿಂದಾಗಿ ದಿಳ್ಳೆಪ್ಪ ಭೀಮಪ್ಪ ಬೂದನೂರು ಎಂಬ ರೈತನ ಭತ್ತದ ಬೆಳೆ ನಾಶವಾಗಿತ್ತು. ಪರಿಣಾಮ ನೊಂದಿರುವ ಅವರು ಇದೀಗ ಆತ್ಮಹತ್ಯೆಗೆ ಶರಣಾಗಿದ್ದಾರೆ.
![ಪ್ರವಾಹದಿಂದ ಬೆಳೆ ಹಾನಿ: ನೊಂದ ರೈತ ಆತ್ಮಹತ್ಯೆಗೆ ಶರಣು farmer committed suicide at ranebennuru](https://etvbharatimages.akamaized.net/etvbharat/prod-images/768-512-9364275-180-9364275-1604038965005.jpg)
ರೈತ ಆತ್ಮಹತ್ಯೆ
ದಿಳ್ಳೆಪ್ಪ ಭೀಮಪ್ಪ ಬೂದನೂರು (50) ಆತ್ಮಹತ್ಯೆ ಮಾಡಿಕೊಂಡ ರೈತ. ಇತ್ತೀಚೆಗೆ ಸುರಿದ ಅಧಿಕ ಮಳೆಯಿಂದ ನದಿ ಪ್ರವಾಹ ಹೆಚ್ಚಾಗಿ ಭತ್ತದ ಗದ್ದೆಗೆ ನೀರು ನುಗ್ಗಿತ್ತು. ಇದರಿಂದ ಬೆಳೆ ಸಂಪೂರ್ಣ ನಾಶವಾಗಿತ್ತು. ಹೀಗಾಗಿ ನೊಂದ ರೈತ ಪರಿಹಾರಕ್ಕೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಅಲ್ಲದೆ ಬ್ಯಾಂಕ್ ಸೇರಿದಂತೆ ವಿವಿಧ ಕಡೆ ಐದು ಲಕ್ಷ ರೂ ಸಾಲ ಮಾಡಿದ್ದರಂತೆ.
ರಾಣೆಬೆನ್ನೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.