ಹಾವೇರಿ : ಇದೇ ತಿಂಗಳು 6 ರಂದು ನದಿ ನೀರು ಪಾಲಾಗಿದ್ದ ರೈತನ ಮೃತದೇಹ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಶೃಂಗೇರಿ ಗ್ರಾಮದ ಬಳಿ ಪತ್ತೆಯಾಗಿದೆ.
ಧರ್ಮಾ ನದಿಗೆ ಬಿದ್ದಿದ್ದ ರೈತನ ಮೃತದೇಹ ಪತ್ತೆ - ಹಾನಗಲ್ ಪೊಲೀಸ್ ಠಾಣೆ
ಆಗಸ್ಟ್ 6 ರಂದು ಜಮೀನಿಗೆ ತೆರಳುತ್ತಿದ್ದ ವೇಳೆ ಕಾಲು ಜಾರಿ ಧರ್ಮಾ ನದಿಗೆ ಬಿದ್ದಿದ್ದ ರೈತನ ಮೃತದೇಹ ಹದಿನೇಳು ದಿನಗಳ ನಂತರ ಪತ್ತೆಯಾಗಿದ್ದು, ಸ್ಥಳಕ್ಕೆ ತಹಶೀಲ್ದಾರ್ ಮತ್ತು ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರೈತನ ಮೃತದೇಹ ಪತ್ತೆ
ಶಿವಪ್ಪ ಸೊಟ್ಟಕ್ಕನವರ (50) ನೀರು ಪಾಲಾಗಿದ್ದ ರೈತ. ಆಗಸ್ಟ್ 6 ರಂದು ಜಮೀನಿಗೆ ತೆರಳುತ್ತಿದ್ದ ವೇಳೆ ಕಾಲು ಜಾರಿ ಧರ್ಮಾ ನದಿಗೆ ಬಿದ್ದಿದ್ದ ರೈತ. ಹದಿನೇಳು ದಿನಗಳ ನಂತರ ಅವ್ರ ಮೃತದೇಹ ಪತ್ತೆಯಾಗಿದ್ದು, ಸ್ಥಳಕ್ಕೆ ತಹಶೀಲ್ದಾರ್ ಮತ್ತು ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾನಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ಜರುಗಿದೆ.