ರಾಣೆಬೆನ್ನೂರು(ಹಾವೇರಿ): ಎಸಿಬಿ ಅಧಿಕಾರಿ ಎಂದು ಹೇಳಿಕೊಂಡು ನಗರಸಭೆಯ ಅಧಿಕಾರಿಗಳಿಗೆ ವಂಚಿಸುತ್ತಿದ್ದ ನಕಲಿ ಅಧಿಕಾರಿಯನ್ನು ಇಲ್ಲಿನ ಶಹರ್ ಠಾಣಾ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ರಾಣೆಬೆನ್ನೂರಲ್ಲಿ ನಕಲಿ ಎಸಿಬಿ ಅಧಿಕಾರಿ ಅರೆಸ್ಟ್ - ರಾಣೇಬೇನ್ನೂರಲ್ಲಿ ನಕಲಿ ಎಸಿಬಿ ಅಧಿಕಾರಿ ಬಂಧನ
ನಗರಸಭೆಯ ಅಧಿಕಾರಿಗಳಿಗೆ ವಂಚಿಸುತ್ತಿದ್ದ ನಕಲಿ ಎಸಿಬಿ ಅಧಿಕಾರಿಯನ್ನು ರಾಣೆಬೆನ್ನೂರಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಹಲಸೂರು ನಿವಾಸಿ ಜಾನ್ ಮ್ಯಾಥ್ಯೂ ಅಲಿಯಾಸ್ ಕೆ ಪಿ ಮ್ಯಾಥ್ಯೂ ಬಂಧಿತ ಆರೋಪಿ. ಈತ ನಗರಸಭೆಯ ಇಂಜಿನಿಯರ್ ಮಹೇಶ್ ಗುಡಿಸಲಮನಿ ಎಂಬುವರಿಗೆ ತಾನು ಎಸಿಬಿ ಅಧಿಕಾರಿ. ಇತ್ತೀಚಿಗೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ ಪಟ್ಟಿಯಲ್ಲಿ ನಿಮ್ಮ ಹೆಸರಿದೆ. ನನಗೆ ಹಣ ನೀಡಿದರೆ ನಿಮ್ಮ ಹೆಸರನ್ನು ಪಟ್ಟಿಯಿಂದ ತೆಗೆಯುವುದಾಗಿ ಹಣದ ಬೇಡಿಕೆ ಇಟ್ಟಿದ್ದನಂತೆ.
ಬಳಿಕ ಇಂಜಿನಿಯರ್ ಈ ವಿಷಯವನ್ನು ನಗರಸಭೆ ಪೌರಾಯುಕ್ತರಾದ ಉದಯ್ ಕುಮಾರ್.ಬಿ. ಟಿ ಅವರ ಗಮನಕ್ಕೆ ತಂದು ರಾಣೆಬೆನ್ನೂರಿನ ಶಹರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತಕ್ಷಣ ಕಾರ್ಯ ಪ್ರವೃತರಾದ ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ವಿರುದ್ಧ ಐಪಿಸಿ ಸೆಕ್ಷನ್ 385,418,419,420,511 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗಟ್ಟಿದ್ದಾರೆ.