ರಾಣೆಬೆನ್ನೂರು: ಕೊರೊನಾ ವಿರುದ್ಧ ಹೋರಾಡುತ್ತಿರುವ ಪೊಲೀಸ್ ಇಲಾಖೆ ಸಿಬ್ಬಂದಿಗೆ ಔಷಧಿ ಅಂಗಡಿ ಮಾಲೀಕರು ಫೇಸ್ ಶೀಲ್ಡ್ ಮಾಸ್ಕ್ ವಿತರಣೆ ಮಾಡಿದ್ದಾರೆ.
ಪೊಲೀಸರಿಗೆ ಫೇಸ್ ಶೀಲ್ಡ್ ಮಾಸ್ಕ್ ವಿತರಿಸಿದ ಪಂಚಮುಖಿ ಮೆಡಿಕಲ್ ಶಾಪ್ ನಗರದ ಪಂಚಮುಖಿ ಮೆಡಿಕಲ್ ಶಾಪ್ ವತಿಯಿಂದ ರಾಣೆಬೆನ್ನೂರು ಶಹರ, ಗ್ರಾಮಾಂತರ ಮತ್ತು ಸಂಚಾರಿ ಠಾಣೆಯ ಎಲ್ಲಾ ಪೊಲೀಸ್ ಸಿಬ್ಬಂದಿಗೆ ಮಾಸ್ಕ್ ವಿತರಿಸಲಾಯಿತು.
ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ತಾಲೂಕಿನಲ್ಲಿ ಕೊರೊನಾ ವಿರುದ್ಧ ಹಗಲಿರುಳು ಹೋರಾಡುತ್ತಿರುವ ಪೊಲೀಸ್ ಸಿಬ್ಬಂದಿಯ ಆರೋಗ್ಯ ದೃಷ್ಟಿಯಿಂದ ಪಂಚಮುಖಿ ಮೆಡಿಕಲ್ ಶಾಪ್ ಮಾಸ್ಕ್ ವಿತರಣೆ ಮಾಡಿರುವುದು ಸಂತಸದ ವಿಷಯ ಎಂದರು.
ಇದನ್ನು ಪೊಲೀಸರು ಬಳಸಿಕೊಂಡು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು. ಎಪಿಎಂಸಿ ಸದಸ್ಯ ಬಸವರಾಜ ಹುಲ್ಲತ್ತಿ, ನಗರಸಭಾ ಸದಸ್ಯ ಮಲ್ಲಿಕಾರ್ಜುನ ಅಂಗಡಿ, ಡಿಎಸ್ಪಿ ಟಿ.ವಿ.ಸುರೇಶ, ಸಿಪಿಐ ಸುರೇಶ ಸಗರಿ, ಲಿಂಗನಗೌಡ ನೆಗಳೂರು, ಪಿಎಸ್ಐ ಪ್ರಭು ಕೆಳಗಿನಮನಿ ಇದ್ದರು.